ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ-ಪ್ರೇರಣಾ ನಿಶ್ಚಿತಾರ್ಥ ಇಂದು
ಭಾನುವಾರ, 9 ಡಿಸೆಂಬರ್ 2018 (08:34 IST)
ಬೆಂಗಳೂರು: ಲೈಂಗಿಕ ಕಿರುಕುಳ ಆರೋಪದ ಬೇಸರದಲ್ಲಿದ್ದ ಸರ್ಜಾ ಕುಟುಂಬಕ್ಕೆ ಇಂದು ಧ್ರುವ ಸರ್ಜಾ ನಿಶ್ಚಿತಾರ್ಥ ನೆಪದಲ್ಲಿ ಖುಷಿಪಡಲು ಕಾರಣ ಸಿಕ್ಕಿದೆ.
ಇಂದು ಬೆಂಗಳೂರಿನ ಶ್ರೀ ಧರ್ಮಗಿರಿ ದೇವಾಲಯದಲ್ಲಿ ಧ್ರುವ ಸರ್ಜಾ ಮತ್ತು ಪ್ರೇರಣಾ ಶಂಕರ್ ವಿವಾಹ ನಿಶ್ಚಿತಾರ್ಥ ನಡೆಯಲಿದೆ. ಇದಕ್ಕಾಗಿ ಎರಡು ದಿನಗಳಿಂದ ಇಲ್ಲಿ ತಯಾರಿ ನಡೆಯುತ್ತಿದೆ. ಸ್ವತಃ ಧ್ರುವ ಸರ್ಜಾ ಇಲ್ಲಿಗೆ ಆಗಮಿಸಿ ವಿಶೇಷವಾಗಿ ಚಪ್ಪರ ನಿರ್ಮಾಣದ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಈ ಸಮಾರಂಭಕ್ಕೆ ಸರ್ಜಾ ಕುಟುಂಬಸ್ಥರು, ಆಪ್ತರು ಆಗಮಿಸುವ ನಿರೀಕ್ಷೆಯಿದೆ. ಧ್ರುವ ಮತ್ತು ಪ್ರೇರಣಾ ಸದ್ಯಕ್ಕೆ ನಿಶ್ಚಿತಾರ್ಥ ಮಾತ್ರವೇ ಮಾಡಿಕೊಳ್ಳಲಿದ್ದು, ವಿವಾಹ ಯಾವಾಗ ಎಂದು ಇನ್ನಷ್ಟೇ ಬಹಿರಂಗಗೊಳಿಸಬೇಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ