ಜ್ಯೂನಿಯರ್ ಚಿರು ನನ್ನ ಡಾರ್ಲಿಂಗ್: ಧ್ರುವ ಸರ್ಜಾ

ಗುರುವಾರ, 2 ಸೆಪ್ಟಂಬರ್ 2021 (09:43 IST)
ಬೆಂಗಳೂರು: ಚಿರು ಸರ್ಜಾ-ಮೇಘನಾ ಪುತ್ರ ಜ್ಯೂನಿಯರ್ ಚಿರು ಬಗ್ಗೆ ಚಿಕ್ಕಪ್ಪ ಧ್ರುವ ಸರ್ಜಾ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.


ಚಿರು ಅಕಾಲಿಕ ಮರಣದ ನಂತರ ಸರ್ಜಾ ಕುಟುಂಬಕ್ಕೆ ಸಂತೋಷ ಕೊಟ್ಟಿದ್ದ ಜ್ಯೂನಿಯರ್ ಚಿರು ಆಗಮನ. ತನ್ನ ಅಣ್ಣನ ಮಗನ ಬಗ್ಗೆ ಧ್ರುವ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

‘ಜ್ಯೂನಿಯರ್ ಚಿರು ನನ್ನ ಡಾರ್ಲಿಂಗ್ ಶಿಷ್ಯ. ಅವನನ್ನು ನೋಡದೇ ಒಂದು ತಿಂಗಳೇ ಆಗಿದೆ. ನನ್ನ ಅತ್ತಿಗೆ ಅವನ ಫೋಟೋ, ವಿಡಿಯೋ ಎಲ್ಲಾ ಕಳುಹಿಸುತ್ತಿರುತ್ತಾರೆ. ನಾನು ಅವನನ್ನು ಸದಾ ನೋಡುತ್ತಿರುತ್ತೇನೆ’ ಎಂದು ಧ್ರುವ ಹೇಳಿಕೊಂಡಿದ್ದಾರೆ. ಇನ್ನು, ಮೊದಲ ಬಾರಿಗೆ ಜ್ಯೂನಿಯರ್ ಚಿರು ನೋಡಿದಾಗ ಅವನ ಪುಟಾಣಿ ಕಣ್ಣು ಸೆಳೆದಿತ್ತು. ಅದನ್ನೇ ಎಲ್ಲರಿಗೂ ಹೇಳಿಕೊಂಡು ಬಂದಿದ್ದೆ. ಅವನ ತುಟಿಗಳು ಪಕ್ಕಾ ನನ್ನ ಅಣ್ಣನ ಹಾಗೆಯೇ ಇದೆ’ ಎಂದು ಧ್ರುವ ಅಣ್ಣನ ಮಗನ ಬಗ್ಗೆ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ