ಅಣ್ಣ ಚಿರಂಜೀವಿ ಸರ್ಜಾ ಸಮಾಧಿ ಪಕ್ಕದಲ್ಲೇ ಮಲಗಿ ಮಗುವಿನಂತೆ ನಿದ್ರಿಸಿದ್ದ ಧ್ರುವ ಸರ್ಜಾ

ಶುಕ್ರವಾರ, 8 ಸೆಪ್ಟಂಬರ್ 2023 (16:12 IST)
ಬೆಂಗಳೂರು: ಅಣ್ಣ ಚಿರಂಜೀವಿ ಸರ್ಜಾ ಎಂದರೆ ನಟ ಧ‍್ರುವ ಸರ್ಜಾಗೆ ಎಷ್ಟು ಅಚ್ಚುಮೆಚ್ಚು ಎಂದು ಎಲ್ಲರಿಗೂ ಗೊತ್ತು. ಇದೀಗ ಅಣ್ಣನ ಸಮಾಧಿ ಪಕ್ಕದಲ್ಲೇ ಧ್ರುವ ಸರ್ಜಾ ಮಲಗಿ ನಿದ್ರಿಸಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಧ್ರುವ ಫಾರ್ಮ್ ಹೌಸ್ ನಲ್ಲೇ ಚಿರಂಜೀವಿ ಸರ್ಜಾರ ಸಮಾಧಿಯಿದೆ. ಅಣ್ಣನ ನೆನಪಾದಾಗಲೆಲ್ಲಾ ಧ್ರುವ ಆಗಾಗ ಇಲ್ಲಿಗೆ ಭೇಟಿ ನೀಡುತ್ತಲೇ ಇರುತ್ತಾರೆ.

ಇದೀಗ ಧ್ರುವ ಸಮಾಧಿ ಬಳಿಯೇ ಕೇವಲ ಒಂದು ಹಾಸು ಹಾಸಿಕೊಂಡು ಮಲಗಿ ಮಗುವಿನಂತೆ ಮೈ ಮರೆತು ನಿದ್ರಿಸುತ್ತಿರುವ ವಿಡಿಯೋ ಹರಿದಾಡುತ್ತಿದೆ. ಈ ವಿಡಿಯೋ ಎಷ್ಟೋ ಜನರ ಕಣ್ಣಂಚು ಒದ್ದೆಯಾಗಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ