ಧ್ರುವ ಸರ್ಜಾ ಬರ್ತ್ಡೇ ದಿನ ರಿಲೀಸ್ ಆಗಲಿದೆ ‘ರಾಜಮಾರ್ತಾಂಡ’
ಚಿರಂಜೀವಿ ಸರ್ಜಾ ಅವರು ನಮ್ಮನ್ನು ಅಗಲಿ ಕೆಲವು ವರ್ಷಗಳು ಕಳೆದಿವೆ. ಅವರ ನಟನೆಯ ಕೊನೆಯ ಸಿನಿಮಾ ರಾಜಮಾರ್ತಾಂಡ ಚಿತ್ರದ ಶೂಟಿಂಗ್ ಪೂರ್ಣಗೊಂಡಿತ್ತು. ಆದರೆ, ಡಬ್ಬಿಂಗ್ ಕೆಲಸಗಳು ಆಗಿರಲಿಲ್ಲ. ಚಿರು ಪಾತ್ರಕ್ಕೆ ಧ್ರುವ ಸರ್ಜಾ ಅವರು ಧ್ವನಿ ನೀಡಿದ್ದಾರೆ. ಈ ಸಿನಿಮಾದ ರಿಲೀಸ್ ದಿನಾಂಕ ಕಾರಣಾಂತರಗಳಿಂದ ಮುಂದೂಡಲ್ಪಡುತ್ತಲೇ ಇತ್ತು. ಈಗ ಸಿನಿಮಾಗೆ ಬಿಡುಗಡೆ ದಿನಾಂಕ ನಿಗದಿ ಆಗಿದೆ. ಧ್ರುವ ಸರ್ಜಾ ಬರ್ತ್ಡೇ ದಿನ ಅಕ್ಟೋಬರ್ 6 ರಾಜಮಾರ್ತಾಂಡ ರಿಲೀಸ್ ಆಗಲಿದೆ ಎಂದು ತಂಡ ಹೇಳಿಕೊಂಡಿದೆ. ಚಿರು ನಿಧನಕ್ಕೂ ಮುಂಚೆ ರಾಜಮಾರ್ತಾಂಡ ಚಿತ್ರದಲ್ಲಿ ನಟಿಸಿದ್ದರು. ಶೂಟಿಂಗ್ ಕೂಡ ಪೂರ್ಣಗೊಂಡಿತ್ತು. ಡಬ್ಬಿಂಗ್ ಕೆಲಸಗಳು ಬಾಕಿ ಇದ್ದವು. ಆದರೆ, ಈ ಸಂದರ್ಭದಲ್ಲಿ ಚಿರಂಜೀವಿ ಅವರು ಹೃದಯಾಘಾತದಿಂದ ಮೃತಪಟ್ಟರು. ಈಗ ಬಾಕಿ ಇದ್ದ ಡಬ್ಬಿಂಗ್ ಕೆಲಸವನ್ನು ಧ್ರುವ ಸರ್ಜಾ ಪೂರ್ಣಗೊಳಿಸಿದ್ದು ಸರ್ಜಾ ಅವರ ಅಭಿಮಾನಿಗಳು ಚಿತ್ರ ಬಿಡುಗಡೆಗೆ ಕಾತುರದಿಂದ ಕಾಯ್ತಿದ್ದಾರೆ.