ಲೂಸ್ ಮಾದ ಯೋಗಿ ಪಾರ್ಟಿ ರದ್ದಾಂತದ ಬಗ್ಗೆ ದೂರು ನೀಡಿದ್ದ ನೆರೆಮನೆಯವರು

ಮಂಗಳವಾರ, 22 ಸೆಪ್ಟಂಬರ್ 2020 (11:01 IST)
ಬೆಂಗಳೂರು: ಡ್ರಗ್ ಮಾಫಿಯಾ ಲಿಂಕ್ ಬಗ್ಗೆ ವಿಚಾರಣೆಗೊಳಗಾಗಿರುವ ನಟ ಲೂಸ್ ಮಾದ ಯೋಗಿ ಕೆಲವು ದಿನಗಳ ಹಿಂದಷ್ಟೇ ತಮ್ಮ ಮನೆಯಲ್ಲಿ ಪಾರ್ಟಿ ನಡೆಸಿ ರಾದ್ದಾಂತ ಮಾಡಿದ್ದಕ್ಕೆ ನೆರೆಹೊರೆಯವರ ಕೆಂಗಣ್ಣಿಗೆ ಗುರಿಯಾಗಿದ್ದರು ಎನ್ನಲಾಗಿದೆ.


ನೆರೆಮನೆಯವರು ಲೂಸ್ ಮಾದ ಯೋಗಿ ಮನೆಯಲ್ಲಿ ಕೇಳಿಬರುತ್ತಿದ್ದ ಜೋರಾದ ಪಾರ್ಟಿ ಗದ್ದಲದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ಪೊಲೀಸರು ನಟ ಯೋಗಿಗೆ ವಾರ್ನ್ ಮಾಡಿದ್ದರು ಎಂಬ ಸುದ್ದಿ ಬರುತ್ತಿದೆ. ಆದರೆ ಯೋಗಿ ವಿರುದ್ಧವಿರುವ ಆರೋಪವನ್ನು ಅವರ ಪೋಷಕರು ನಿರಾಕರಿಸಿದ್ದಾರೆ. ನಮ್ಮ ಮಗ ಅಂತಹವನಲ್ಲ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ