ಡ್ರಗ್ ದಂಧೆ: ಗಟ್ಟಿಮೇಳ ಧಾರವಾಹಿಯ ಇಬ್ಬರು, ಬ್ರಹ್ಮಗಂಟು ನಾಯಕಿ ಗೀತಾಗೆ ವಿಚಾರಣೆಯ ಬಿಸಿ
ಮಂಗಳವಾರ, 22 ಸೆಪ್ಟಂಬರ್ 2020 (10:19 IST)
ಬೆಂಗಳೂರು: ಡ್ರಗ್ ದಂಧೆಗೆ ಸಂಬಂಧ ಪಟ್ಟಂತೆ ಈಗ ಕಿರುತೆರೆ ನಟ-ನಟಿಯರಿಗೆ ದೊಡ್ಡ ಶಾಕ್ ಕಾದಿದೆ. ನಟಿ ಗೀತಾ ಭಾರತಿ ಭಟ್, ರಶ್ಮಿಕಾ ಚಂಗಪ್ಪ, ನಟ ಅಭಿಷೇಕ್ ದಾಸ್ ಸೇರಿದಂತೆ ಕಿರುತೆರೆಯ ಖ್ಯಾತ ನಟ-ನಟಿಯರನ್ನು ಆಂತರಿಕ ಭದ್ರತಾ ದಳ ತನಿಖೆಗೊಳಪಡಿಸಲಿದೆ.
ಗಟ್ಟಿಮೇಳ ಧಾರವಾಹಿಯ ವಿಕ್ಕಿ ಪಾತ್ರಧಾರಿ ಅಭಿಷೇಕ್ ದಾಸ್, ಇದೇ ಧಾರವಾಹಿಯಲ್ಲಿ ಖಳನಟಿ ಪಾತ್ರ ಮಾಡಿದ್ದ ರಶ್ಮಿಕಾ, ಬ್ರಹ್ಮಗಂಟು ಧಾರವಾಹಿಯಲ್ಲಿ ನಾಯಕಿ ಪಾತ್ರ ಮಾಡುತ್ತಿರುವ ಗೀತಾ ಭಾರತಿ ಭಟ್ ಇಂದು ವಿಚಾರಣೆಗೊಳಗಾಗಲಿದ್ದಾರೆ. ಅವರಲ್ಲದೆ ಇನ್ನಷ್ಟು ಕಿರುತೆರೆ ನಟ-ನಟಿಯರು, ನಿರ್ದೇಶಕರನ್ನೂ ವಿಚಾರಣೆಗೊಳಪಡಿಸುವ ಸಾಧ್ಯತೆಯಿದೆ.