ನಮ್ಮ ಮೆಟ್ರೋದಲ್ಲಿ ದಿಗಂತ್-ಐಂದ್ರಿತಾ ದಂಪತಿ ಸಂಡೇ ಜಾಲಿ ರೈಡ್

ಭಾನುವಾರ, 10 ಅಕ್ಟೋಬರ್ 2021 (17:16 IST)
ಬೆಂಗಳೂರು: ನಟ ದೂದ್ ಪೇಡ ದಿಗಂತ್-ಐಂದ್ರಿತಾ ರೇ ದಂಪತಿ ಭಾನುವಾರವನ್ನು ನಮ್ಮ ಮೆಟ್ರೋದಲ್ಲಿ ಜಾಲಿ ರೈಡ್ ಮಾಡುವ ಮೂಲಕ ಕಳೆದಿದ್ದಾರೆ. ಜೊತೆಗೆ ಅಭಿಮಾನಿಗಳಿಗೆ ಸುಂದರ ಸಂದೇಶವನ್ನೂ ನೀಡಿದ್ದಾರೆ.


ಮುಖಕ್ಕೆ ಮಾಸ್ಕ್, ಮಫ್ಲರ್ ಸುತ್ತಿಕೊಂಡು ಗುರುತೇ ಸಿಗದಂತೆ ಇಬ್ಬರೂ ನಮ್ಮ ಮೆಟ್ರೋದಲ್ಲಿ ಪ್ರಯಾಣ ನಡೆಸಿದ ಖುಷಿಯನ್ನು ವಿಡಿಯೋ ಸಮೇತ ಹಂಚಿಕೊಂಡಿದ್ದಾರೆ.

ಜೊತೆಗೆ ಎಂದಿನ ಟ್ರಾಫಿಕ್ ಕಿರಿ ಕಿರಿ, ವಾಹನದ ಧೂಳು ಕಾಟವಿಲ್ಲದೇ ಆರಾಮವಾಗಿ ನಮ್ಮ ಮೆಟ್ರೋದಲ್ಲಿ ಕುಳಿತು ಬೆಂಗಳೂರಿನ ಸೌಂದರ್ಯ ಸವಿಯಬಹುದು ಎಂದು ಐಂದ್ರಿತಾ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ