ಮಾವನೇ ನಮಗೆಲ್ಲಾ ಆದರ್ಶ: ಐಶ್ವರ್ಯಾ ರೈ

ಮಂಗಳವಾರ, 6 ಅಕ್ಟೋಬರ್ 2015 (11:10 IST)
ನಟಿ ಐಶ್ವರ್ಯಾ ರೈ ಮಾಜಿ ವಿಶ್ವ ಸುಂದರಿ. ವಿಶ್ವದಾದ್ಯಂತ ಮನೆ ಮಾತಾಗಿರುವ ಐಶ್ವರ್ಯಾ ನಿಜ ಜೀವನದಲ್ಲಿ ಮೇರು ನಟ ಅಮಿತಾಬ್ ಸೊಸೆ ಕೂಡ ಹೌದು. ಆದ್ರೆ ತಾನೊಬ್ಬ ನಟಿ , ಸೊಸೆ, ತಾಯಿ ಈ ಎಲ್ಲಾ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ತನ್ನ ಮನೆಯವರ ಸಹಕಾರ ಅತ್ಯಂತ ಮುಖ್ಯವಾದದ್ದು ಎಂದು ಐಶ್ ಹೇಳಿದ್ದಾರೆ. ಹಾಗೇ ಮಾವ ಅಮಿತಾಬ್ ಬಚ್ಚನ್ ನಮಗೆಲ್ಲಾ ಸ್ಫೂರ್ತಿ ಎಂದಿದ್ದಾರೆ ಐಶ್ವರ್ಯಾ.
ಅಮಿತಾಬ್ ತಮ್ಮ 40 ವರ್ಷದ ಸಿನಿಮಾ ಜೀವನದಲ್ಲಿ ಅದ್ಭುತವಾದ ಸಿನಿಮಾಗಳನ್ನು ಮಾಡಿದ್ದಾರೆ. ಝಂಜೀರ್, ಶೋಲೆ, ಡಾನ್ ಅಭಿಮಾನ್ ಹೀಗೆ ಅವರು ಮಾಡಿದ ಸಿನಿಮಾಗಳು ಯಾವತ್ತಚಿಗೂ ಮರೆಯಲಾರದಂತವುಗಳು. ಆದ್ರೀವತ್ತು ನಾನು ಅಂತಹ ಅದ್ಭುತ ನಟನ ಸೊಸೆ. ಅವರೊಂದಿಗೆ ನಟಿಯಾಗಿಯೂ ನಾನು ಕೆಲಸ ಮಾಡಿದ್ದೇನೆ. ಆದ್ರೆ ಅವರಿಗೆ ಅವರೇ ಸಾಟಿ ಎಂದು ಐಶ್ ಹೇಳಿದ್ದಾರೆ.
 
ಅವರು ಯಾವತ್ತಿಗೂ ಸಾಂಪ್ರದಾಯಿಕವಾದಿ. ಮುಂದೆಯೋ ಅವರು ಹಾಗೇ ಇರುತ್ತಾರೆ. ಅವರು ನನ್ನ ಮಾವ ಎಂದು ಹೇಳಿಕೊಳ್ಳಲು ನಾನು ಹೆಮ್ಮೆಪಡುತ್ತೇನೆ. ಜೊತೆಗೆ ಅವರೊಂದಿಗೆ ಕೆಲಸ ಮಾಡಿದ್ದು ನನ್ನ ಪುಣ್ಯ ಅಂದುಕೊಳ್ಳುತ್ತೇನೆ ಅಂತಾ ಐಶ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ