ನಟ ದಿಲೀಪ್ ಆರೋಪಿ ಪಲ್ಸರ್ ಸುನಿಗೆ ಸುಪಾರಿ ಕೊಡುವ ವಿಡಿಯೋ ಲೀಕ್?

ಮಂಗಳವಾರ, 11 ಜುಲೈ 2017 (10:47 IST)
ಕೊಚ್ಚಿ: ಬಹುಭಾಷಾ ನಟಿಯ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ದಿಲೀಪ್ ಮೂರು ವರ್ಷದ ಮೊದಲೇ ಆರೋಪಿ ಪಲ್ಸರ್ ಸುನಿಗೆ ಸುಪಾರಿ ನೀಡಿದ್ದರು ಎಂಬ ವಿಡಿಯೋ ಒಂದು ಪೊಲೀಸರ ಕೈಗೆ ಸಿಕ್ಕಿದೆ ಎಂದು ಮಲಯಾಳಂ ಟಿವಿ ಮಾಧ್ಯಮಗಳು ವರದಿ ಮಾಡಿವೆ.


ದಿಲೀಪ್ ಇದೀಗ ಮದುವೆಯಾಗಿರುವ ದ್ವಿತೀಯ ಪತ್ನಿ ಕಾವ್ಯಾ ಮಾಧವನ್ ಜತೆಗಿನ ಅಫೇರ್ ನ್ನು ಬಹಿರಂಗಗೊಳಿಸಿದ್ದರಿಂದ ದಿಲೀಪ್ ಸಿಟ್ಟಿಗೆದ್ದಿದ್ದರು ಎಂದು ಮಾಧ್ಯಮ ವರದಿಗಳು ಹೇಳಿವೆ. ಅದರಂತೆ ಮೂರು ವರ್ಷಗಳ ಹಿಂದೆ ಹೋಟೆಲ್ ಕೊಠಡಿಯೊಂದರಲ್ಲಿ ದಿಲೀಪ್ ಆರೋಪಿ ಪಲ್ಸರ್ ಸುನಿಗೆ ಸುಪಾರಿ ನೀಡಿದ್ದರು ಎಂದು ಮಾಧ್ಯಮಗಳು ಹೇಳಿಕೊಂಡಿವೆ.

ಅದರ ವಿಡಿಯೋಗಳು ಪೊಲೀಸರ ಕೈಗೆ ಸಿಕ್ಕಿವೆ. ಇದರಲ್ಲಿ ದಿಲೀಪ್ ಪ್ರಮುಖ ಆರೋಪಿಗೆ ತನಗೆ ನಟಿಯ ಫೋಟೋಗಳು ಬೇಕು ಎಂದು ಡಿಮ್ಯಾಂಡ್ ಮಾಡಿದ್ದರು ಎಂದು ಖಾಸಗಿ ವಾಹಿನಿಗಳು ಹೇಳಿವೆ. ಇದರೊಂದಿಗೆ ಈ ಪ್ರಕರಣದಲ್ಲಿ ನಟನ ವಿರುದ್ಧ ಕೇರಳಾದ್ಯಂತ ಪ್ರತಿಭಟನೆಗಳು ತಾರಕಕ್ಕೇರುವಂತೆ ಮಾಡಿವೆ. ಅಲ್ಲದೆ ಈ ಪ್ರಕರಣದಲ್ಲಿ ನಟ ದಿಲೀಪ್ ರನ್ನು ಸಮರ್ಥಿಸಿಕೊಂಡಿರುವ ಮಲಯಾಳಂ ಕಲಾವಿದರ ಸಂಘ ‘ಅಮ್ಮ’ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಇದರಿಂದಾಗಿ ನಟ ಮಮ್ಮೂಟ್ಟಿ ಸೇರಿದಂತೆ ಪ್ರಮುಖ ನಟರ ಮನೆಗೆ ಬಿಗಿ ಭದ್ರತೆ ಒದಗಿಸಲಾಗಿದೆ.

ಇದನ್ನೂ ಓದಿ.. ನಟ ದಿಲೀಪ್ ಬಗ್ಗೆ ತನಿಖಾ ತಂಡದ ಮೂಲಗಳನ್ನು ಆಧರಿಸಿ ಮಲಯಾಳಂ ಮಾಧ್ಯಮ ಹೊರಹಾಕಿದ ಭಯಾನಕ ಸತ್ಯಗಳು!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ