ನಟಿ ಮೇಲೆ ದೌರ್ಜನ್ಯ ಕೇಸ್: ನಟ ದಿಲೀಪ್ ಮನೆ ಮೇಲೆ ಪೊಲೀಸರ ದಾಳಿ

ಶುಕ್ರವಾರ, 14 ಜನವರಿ 2022 (10:10 IST)
ಕೊಚ್ಚಿ: ನಟಿ ಮೇಲೆ ಆಕ್ರಮಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ಮಲಯಾಳಂ ನಟ ದಿಲೀಪ್ ನಿವಾಸದ ಮೇಲೆ ನಿನ್ನೆ ಕ್ರೈಂ ಬ್ರ್ಯಾಂಚ್ ಪೊಲೀಸರು ದಾಳಿ ನಡೆಸಿದ್ದಾರೆ.

ದಿಲೀಪ್ ತನಿಖಾಧಿಕಾರಿಗಳಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಮಲಯಾಳಂ ನಿರ್ದೇಶಕ ಬಾಲಚಂದರ್ ಇತ್ತೀಚೆಗೆ ಆರೋಪಿಸಿದ್ದರು. ಹೀಗಾಗಿ ಈ ವಿಚಾರದ ಬಗ್ಗೆ ತನಿಖಾ ತಂಡ ತನಿಖೆ ನಡೆಸುತ್ತಿದೆ.

ಇದಕ್ಕೆ ಸೂಕ್ತ ಸಾಕ್ಷ್ಯ ಸಂಗ್ರಹಿಸಲು ದಿಲೀಪ್ ಮತ್ತು ಅವರ ಸಹೋದರನ ನಿವಾಸಕ್ಕೆ ದಾಳಿಯಿಟ್ಟ ಪೊಲೀಸರು ದಿಲೀಪ್ ಅವರಿಗೆ ಸೇರಿದ ಮೊಬೈಲ್, ಹಾರ್ಡ್ ಡಿಸ್ಕ್ ಸೇರಿದಂತೆ ಮತ್ತಿತರ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ