ಜೀವನಪಾಠ ಹೇಳುತ್ತಂತೆ ದಿಲ್ ವಾಲೇ ಸಿನಿಮಾ

ಗುರುವಾರ, 26 ನವೆಂಬರ್ 2015 (10:40 IST)
ಶಾರುಖ್ ಹಾಗೂ ಕಾಜೋಲ್ ಬಹು ವರ್ಷದ ನಂತರ ಜೊತೆಯಾಗಿರುವ ಸಿನಿಮಾ ದಿಲ್ ವಾಲೇ. ಈ ಸಿನಿಮಾ ಈಗಾಗಲೇ ಬಾಲಿವುಡ್ ಅಂಗಳದಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟಿಹಾಕಿದೆ.  ಹೀಗಿರುವಾಗಲೇ ಸಿನಿಮಾದ ನಾಯಕ ಶಾರುಖ್ ಖಾನ್ ಸಿನಿಮಾವನ್ನು ಪ್ರೇಕ್ಷಕರು ಯಾಕೆ ನೋಡ್ಬೇಕು ಅನ್ನೋ ಬಗ್ಗೆ  ಟ್ವೀಟ್ ಮಾಡಿದ್ದಾರೆ.

ರೋಹಿತ್ ಶೆಟ್ಟಿ ನಿರ್ದೇಶನದ ಈ ಸಿನಿಮಾದ ಬಗ್ಗೆ ಮಾತನಾಡಿರುವ ಕಿಂಗ್ ಖಾನ್ ದಿಲ್ ವಾಲೇ ಸಿನಿಮಾವನ್ನು ಆರಂಭದಿಂದ ಕೊನೆವರೆಗೂ ಕೊಂಚವೂ ಬಿಡದೇ ನೋಡಿ.ಅದರಲ್ಲಿ ಜೀವನಕ್ಕೆ ಬೇಕಾದ ಖುಷಿ, ಕಣ್ಣೀರು, ಇವೆಲ್ಲದರ ಬೆಲೆ ಗೊತ್ತಾಗುತ್ತೆ. ಜೊತೆಗೆ ಜೀವನವನ್ನು ಯಾವ ರೀತಿ ಮುನ್ನಡೆಸಿಕೊಂಡು ಹೋಗಬೇಕು ಅನ್ನೋದು ಗೊತ್ತಾಗುತ್ತೆ ಅಂತಾ ಶಾರುಖ್ ಹೇಳಿದ್ದಾರೆ. ಆ ಮೂಲಕ ಸಿನಿಮಾದ ಬಗ್ಗೆ ಪ್ರೇಕ್ಷಕರಲ್ಲಿ ಇನ್ನಷ್ಟು ಕುತೂಹಲ ಹುಟ್ಟಿ ಹಾಕಿದ್ದಾರೆ.
 
ಸಿನಿಮಾದಲ್ಲಿ ಕಾಜೋಲ್ ಹಾಗೂ ಶಾರುಖ್ ಜೊತೆ ಕೃತಿ ಸನೋನ್ ಹಾಗೂ ವರುಣ್ ಧವನ್ ಕೂಡ ಅಭಿನಯಿಸಿದ್ದಾರೆ. ಶಾರುಖ್ ಸಿನಿಮಾದಲ್ಲಿ ಕೃತಿ- ವರುಣ್ ಪ್ರೀತಿಗೆ ಮಾಸ್ಟರ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಮುಂದಿನ ತಿಂಗಳು 18ರಂದು ರಿಲೀಸ್ ಆಗಲಿದೆ. ಅದೇ ದಿನ ಭಾಜೀರಾವ್ ಮಸ್ತಾನಿ ಸಿನಿಮಾ ಕೂಡ ತೆರೆ ಮೇಲೆ ಬರಲಿದೆ.

ವೆಬ್ದುನಿಯಾವನ್ನು ಓದಿ