ನಿರ್ದೇಶಕ ಮಂಜು ಮೇಲೆ 'ಕಾಸ್ಟಿಂಗ್ ಕೌಚ್' ಆರೋಪ ಸುಳ್ಳು; ಕ್ಷಮೆಯಾಚಿಸಿದ ನಟಿ ಜಯಶ್ರೀ

ಶನಿವಾರ, 18 ಆಗಸ್ಟ್ 2018 (06:27 IST)
ಬೆಂಗಳೂರು : 'ನಟ ನಟಿಯರು ಬೇಕಾಗಿದ್ದಾರೆ' ಚಿತ್ರದ ನಿರ್ದೇಶಕ ಮಂಜು ಹೆದ್ದೂರು ಮೇಲೆ ನಟಿ ಬಿಗ್ ಬಾಸ್ ಜಯಶ್ರೀ ಹೊರಿಸಿರುವ 'ಕಾಸ್ಟಿಂಗ್ ಕೌಚ್' ಆರೋಪಕ್ಕೆ ಇದೀಗ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಮಾಧ್ಯಮಗಳ ಮುಂದೆ ಜಯಶ್ರೀ ಕ್ಷಮೆಯಾಚಿಸಿದ್ದಾರೆ.


ಮಂಜು ಹೆದ್ದೂರು ನಿರ್ದೇಶನ ಮಾಡುತ್ತಿರುವ 'ನಟ ನಟಿಯರು ಬೇಕಾಗಿದ್ದಾರೆ' ಚಿತ್ರಕ್ಕಾಗಿ ಮೊದಲು ಜಯಶ್ರೀ ಆಯ್ಕೆಯಾಗಿದ್ದರು. ಆದರೆ ಕೆಲವು ಕಾರಣಗಳಿಂದ ಅವರನ್ನು ಚಿತ್ರದಿಂದ ಕೈ ಬಿಡಲಾಗಿತ್ತು. ಇದರಿಂದ ಕೋಪಗೊಡ ನಟಿ ಜಯಶ್ರೀ ‘ನನ್ನನ್ನು ಸಿನಿಮಾದಿಂದ ಕೈ ಬಿಡಲಾಗಿದೆ. ಇದಕ್ಕೆಲ್ಲ ನಿರ್ದೇಶಕನ ಮಾತನ್ನು ನಾನು ಕೇಳದೇ ಇರುವುದು ಕಾರಣ. ಲಾಂಗ್ ಡ್ರೈವ್ ಬಾ, ಎಣ್ಣೆ ಹಾಕೋಣ ಬಾ ಬೇಬಿ ಎನ್ನುತ್ತಿದ್ದರು. ಅದಕ್ಕೆ ನಾನು ವಿರೋಧಿಸಿದಕ್ಕೆ ಸಿನಿಮಾದಿಂದ ನನ್ನನ್ನು ಬಿಡಲಾಗಿದೆ' ಎಂದು ಆರೋಪಿಸಿದ್ದರು.


ಈ ಬಗ್ಗೆ ನಿರ್ದೇಶಕ ಮಂಜು ಅವರು ಫಿಲ್ಮ್ ಚೇಂಬರ್ ಗೆ ದೂರು ನೀಡಿ ತಮ್ಮ ತಪ್ಪಿಲ್ಲ ಎಂದು ತಿಳಿಸಿದ್ದಾರೆ. ಇದೀಗ ನಟಿ ಜಯಶ್ರೀ ನಾನು ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿ ತಪ್ಪು ಮಾಡಿದೆ. ಆದ್ದರಿಂದ ಅದು ನನ್ನ ತಪ್ಪು' ಎಂದು ಮಾಧ್ಯಮಗಳ ಮುಂದೆ ಬಂದು ತಮ್ಮ ತಪ್ಪಿನ ಬಗ್ಗೆ ಹೇಳಿ ಕ್ಷಮೆಯಾಚಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ