ಗಂಡು ಮಗುವಿನ ತಾಯಿಯಾದ ಖ್ಯಾತ ಗಾಯಕಿ ನಂದಿತಾ

ಶುಕ್ರವಾರ, 17 ಆಗಸ್ಟ್ 2018 (07:03 IST)
ಬೆಂಗಳೂರು : ಸ್ಯಾಂಡಲ್ ವುಡ್ ನ ಖ್ಯಾತ ಗಾಯಕಿ ನಂದಿತಾ ಅವರು ಸ್ವಾತಂತ್ರ್ಯ ದಿನಾಚರಣೆ ದಿನದಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರಂತೆ.


ಕನ್ನಡದಲ್ಲಿ ಸೂಪರ್ ಹಿಟ್ ಸಿನಿಮಾ ಹಾಡುಗಳನ್ನು ಹಾಡಿ ತಮ್ಮ ಕೋಗಿಲೆ ಕಂಠದಿಂದ ಜನರ ಮನಗೆದ್ದ ನಟಿ ನಂದಿತಾ ಅವರು ರಾಕೇಶ್ ಅವರೊಂದಿಗೆ ವಿವಾಹ ಆಗಿದ್ದು, ಇದೀಗ ಗಂಡು ಮಗುವಿನ ತಾಯಿಯಾಗಿದ್ದಾರೆ.


ಈ ಸಂತಸ ವಿಷಯವನ್ನು ನಂದಿತಾ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೇಸ್ ಬುಕ್ ನಲ್ಲಿ ನಂದಿತಾ ಅವರ ನೂರಾರು ಅಭಿಮಾನಿಗಳು ಹಾಗೂ ಚಿತ್ರರಂಗದ ಮಿತ್ರರು ಶುಭ ಹಾರೈಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ