300 ರೂಪಾಯಿಯಲ್ಲಿ 110 ಕೆಜಿ ತೂಕ ಇಳಿಸಿಕೊಂಡ ನಿರ್ದೇಶಕ ನಂದ ಕಿಶೋರ್

ಮಂಗಳವಾರ, 5 ಜನವರಿ 2016 (10:32 IST)
ಸ್ಯಾಂಡಲ್ ವುಡ್ ನಲ್ಲಿ ಸಕ್ಸಸ್ ಫುಲ್ ನಿರ್ದೇಶಕ ಎನ್ನಿಸಿಕೊಂಡಿರುವ ನಂದಕಿಶೋರ್ ಅವರನ್ನು ಬಹಳ ವರ್ಷಗಳ ನಂತರ ಈಗೇನಾದ್ರೂ ಅವರ ಸ್ನೇಹಿತರು ನೋಡಿದ್ರೆ ನಂಬೋದಕ್ಕೆ ಸಾಧ್ಯನೇ ಇಲ್ಲವಂತೆ ಅದಕ್ಕೆ ಕಾರಣ ಅವರ ದೇಹದ ತೂಕ.

ಹೌದು...ಕಳೆದ ಕೆಲವೇ ತಿಂಗಳಲ್ಲಿ ನಂದಕಿಶೋರ್ ಬರೋಬ್ಬರಿ 11ದ ಕೆಜಿ ತೂಕವನ್ನು ಇಳಿಸಿಕೊಂಡಿದ್ದಾರೆ. ಅದಕ್ಕೆ ಅವರು ಖರ್ಚು ಮಾಡಿದ್ದು ಕೇವಲ 300 ರೂಪಾಯಿಗಳಂತೆ. ಅದಕ್ಕೆ ಸಹಕರಿಸಿದ್ದು ಅವರ ಕೋಚ್ ಸೋಮು ಅವರಂತೆ.ಅಂದ್ಹಾಗೆ ನಂದಕಿಶೋರ್ ದೇಹದ ತೂಕ ಅಷ್ಟೊಂದು ಹೆಚ್ಚಾಗೋದಕ್ಕೂ ಕಾರಣವಿದೆ. ನಂದಕಿಶೋರ್ ಅವರ ತಂದೆ ಸುಧೀರ್ ತೀರಿಕೊಂಡ ಬಳಿಕ ಅವರ ತಾಯಿಗೆ ಕುಟುಂಬವನ್ನು ಮುನ್ನಡೆಸಲು ತುಂಬಾ ಕಷ್ಟವಾಗಿತ್ತಂತೆ. ಇದೇ ಒತ್ತಡದಿಂದ ನಂದಕಿಶೋರ್ ಡಿಪ್ರೆಶನ್ ಗೆ ಹೋಗಿದ್ದರಂತೆ. ಅದರಿಂದ ದೇಹದ ತೂಕ ಹೆಚ್ಚಾಗುತ್ತಾ ಹೋಗಿ ಬರೋಬ್ಬರಿ 220ಕೆಜಿ ತಲುಪಿತ್ತು.ಆದ್ರೀಗ ನಂದಕಿಶೋರ್ ಗೆಳೆಯ ಹೇಳಿದ ಟಿಪ್ಸ್ ಗಳು ಅನುಸರಿಸಿ ತಮ್ಮ ದೇಹದ ತೂಕವನ್ನು 110 ಕೆಜಿ ಗೆ ಇಳಿಸಿಕೊಂಡಿದ್ದಾರೆ.
 
ಒಂದು ಕಾಲದಲ್ಲಿ ಆತ್ಮಹತ್ಯೆಗೆ ಯತ್ನಿದ್ದ ನಂದಕಿಶೋರ್ ಇದೀಗ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಈಗಾಗಲೆ ವಿಕ್ಟರಿ, ಅಧ್ಯಕ್ಷ, ರನ್ನ ಸಿನಿಮಾಗಳನ್ನು ಮಾಡಿ ಗೆದ್ದಿರುವ ನಂದಕಿಶೋರ್ ಸದ್ಯ ಉಪೇಂದ್ರ ಹಾಗೂ ಸುದೀಪ್ ಕಾಂಬಿನೇಷನ್ ನ ಓ ಮೈ ಗಾಡ್ ಸಿನಿಮಾದ ರಿಮೇಕ್ ಗಾಗಿ ತಯಾರಿ ನಡೆಸುತ್ತಿದ್ದಾರೆ.
 

ವೆಬ್ದುನಿಯಾವನ್ನು ಓದಿ