ಸಂಜಯ್ ದತ್ ಭೇಟಿ ಮಾಡಿದ ಜೋಗಿ ಪ್ರೇಮ್: ಏನಿದು ಅಸಲಿಯತ್ತು?!
ಧ್ರುವ ಸರ್ಜಾ ಜೊತೆಗಿನ ಸಿನಿಮಾದ ಟೈಟಲ್ ಇನ್ನೂ ರಿವೀಲ್ ಆಗಿಲ್ಲ. ಇದೇ ತಿಂಗಳು 20 ರಂದು ಟೈಟಲ್ ಅನಾವರಣವಾಗಲಿದೆ. ಟೈಟಲ್ ನ್ನು ಅದ್ಧೂರಿಯಾಗಿ ಲಾಂಚ್ ಮಾಡಲು ಪ್ರೇಮ್ ನಿರ್ಧರಿಸಿದ್ದಾರೆ.
ಇದಕ್ಕಾಗಿ ಈಗಾಗಲೇ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರನ್ನು ಭೇಟಿ ಮಾಡಿ ಟೈಟಲ್ ಲಾಂಚ್ ಮಾಡಲು ಕೇಳಿಕೊಂಡಿದ್ದಾರೆ. ಇದೀಗ ಹಿಂದಿಯಲ್ಲಿ ನಟ ಸಂಜಯ್ ದತ್ ಕೈಯಿಂದಲೇ ಟೈಟಲ್ ಲಾಂಚ್ ಮಾಡಿಸಲು ಪ್ರೇಮ್ ತಯಾರಿ ನಡೆಸಿದ್ದಾರೆ. ಈ ಕಾರಣಕ್ಕೆ ಸಂಜಯ್ ದತ್ ರನ್ನು ಖುದ್ದಾಗಿ ಭೇಟಿ ಮಾಡಿ ಆಹ್ವಾನ ನೀಡಿದ್ದಾರೆ.