ಬಾಡಿಗೆ ತಾಯ್ತನದ ಮೂಲಕ ಮಕ್ಕಳ ಸೆಲೆಬ್ರಿಟಿಗಳು

ಮಂಗಳವಾರ, 11 ಅಕ್ಟೋಬರ್ 2022 (08:10 IST)
WD
ಬೆಂಗಳೂರು: ನಯನತಾರಾ-ವಿಘ‍್ನೇಶ್ ಶಿವನ್ ಜೋಡಿ ಬಾಡಿಗೆ ತಾಯ್ತನದ ಮೂಲಕ ಇಬ್ಬರು ಅವಳಿ ಮಕ್ಕಳನ್ನು ಪಡೆದಿದ್ದಾರೆ.

ಇತ್ತೀಚೆಗೆ ಅನೇಕ ಸೆಲೆಬ್ರಿಟಿಗಳು ಇದೇ ರೀತಿ ಮಗು ಮಾಡಿಕೊಂಡಿದ್ದಾರೆ. ಶಾರುಖ್ ಖಾನ್-ಗೌರಿ ಖಾನ್ ದಂಪತಿ ಅಬ್ ರಾಮ್ ಖಾನ್ ನನ್ನು ಬಾಡಿಗೆ ತಾಯ್ತನದ ಮೂಲಕ ಪಡೆದುಕೊಂಡಿದ್ದರು. ಇದಾದ ಬಳಿಕ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಎರಡನೇ ಮಗುವನ್ನು ಬಾಡಿಗೆ ತಾಯ್ತನದ ಮೂಲಕ ಮಾಡಿಕೊಂಡಿದ್ದರು. ಪ್ರೀತಿ ಝಿಂಟಾ ದಂಪತಿ, ಪ್ರಿಯಾಂಕಾ ಚೋಪ್ರಾ ದಂಪತಿ ಕೂಡಾ ಬಾಡಿಗೆ ತಾಯ್ತನದ ಮೂಲಕವೇ ಮಗು ಪಡೆದುಕೊಂಡಿದ್ದಾರೆ.

ಇದಲ್ಲದೆ, ಇನ್ನೂ ಮದುವೆಯಾಗದೇ ಇರುವ ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್, ತುಷಾರ್ ಕಪೂರ್ ಕೂಡಾ ಬಾಡಿಗೆ ತಾಯ್ತನದ ಮೂಲಕ ಮಗು ಪಡೆದುಕೊಂಡಿದ್ದಾರೆ.

-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ