32 ಕೋಟಿ ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಿಸಲು ಸಿದ್ಧ ಆಗಿರುವ ಶ್ರೀನಿವಾಸ ರಾಜು

ಗುರುವಾರ, 30 ಅಕ್ಟೋಬರ್ 2014 (13:25 IST)
ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿರುವ ಚಿತ್ರ ಆರಂಭದಲ್ಲಿ ಬಸವಣ್ಣ ಎನ್ನುವ ಹೆಸರನ್ನು ಪಡೆದು ಈಗ ಬರಿ ಟೈಟಲ್ ಹೊಂದಿರುವ ಚಿತ್ರ.. ಆದರೆ ಈಗ ಆ ಚಿತ್ರದ ಬಗ್ಗೆ ಹೇಳುತ್ತಿಲ್ಲ. ಏಕೆಂದರೆ ಅದು ಆರಂಭದಿಂದಲೂ ಸಮಸ್ಯೆಯನ್ನು ಸೃಷ್ಟಿ ಮಾಡಿತ್ತು. 
 
ಈಗ ನಾವು ಹೇಳುತ್ತಿರುವ ಚಿತ್ರದ ಹೆಸರು ಅನುಭವ ಮಂಟಪ. ಈ ಚಿತ್ರವನ್ನು ದಂಡುಪಾಳ್ಯ ನಿರ್ದೇಶನ ಮಾಡಿರುವ ಮತ್ತು ವಿವಾದಿತ ಟೈಟಲ್ ಚಿತ್ರವನ್ನು ಸಹ ನಿರ್ದೇಶನ ಮಾಡಿರುವಂತಹ ಶ್ರೀನಿವಾಸರಾಜು ಅವರೇ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರವೂ 32  ಕೋಟಿರೂಪಾಯಿಗಳಲ್ಲಿ ಸಿದ್ಧ ಆಗುತ್ತಿದೆ. ಇದು ಬಸವಣ್ಣನ ಜೀವನವನ್ನು ಆಧರಿಸಿದ ಕಥೆಯಾಗಿದ್ದು, ಅನುಭವ ಮಂಟಪ ಎನ್ನುವ ಹೆಸರು ಫಿಲಿಂ ಚೇಂಬರ್ ನಲ್ಲಿ ನೋಂದಾಯಿಸಿದ್ದಾರೆ ನಿರ್ದೇಶಕರು. 
 
ಉಪ್ಪಿ ಅವರ ವಿಭೂತಿ ಮಾತ್ರ ಇರುವ ಟೈಟಲ್ ಹೊಂದಿರುವ ಚಿತ್ರದಲ್ಲಿ ಉಪೇಂದ್ರ ಅವರ ಕೈಗೆ ಬಂದೂಕ ನೀಡಿ ಜೊತೆಗೆ ಅವರಿಗೆ ಜನಿವಾರ ಹಾಕಿ ವಿವಾದ ಸೃಷ್ಟಿ ಮಾಡಿದ್ದ ಈ ನಿರ್ದೇಶಕ ಅಚಾನಕ್ಕಾಗಿ 12  ನೇ ಶತಮಾನದತ್ತ ಹೊರಲಿರುವುದರ ಬಗ್ಗೆ ಆಶ್ಚರ್ಯ ಉಂಟಾಗಿರುವುದು ಸಹಜ ಸಂಗತಿಯಾಗಿದೆ. ಈ ಬಗ್ಗೆ ಅವರು ಹೇಳುವ ಮಾತಿಷ್ಟೇ ಬಸವಣ್ಣ ಎನ್ನುವ ಚಿತ್ರ ಟೈಟಲ್ ವಿವಾದ ವಾಗಲು ಕಾರಣ ತಾನಂತೂ ಖಂಡಿತ ಅಲ್ಲ. ಸುಖಾಸುಮ್ಮನೆ ಈ ರೀತಿ ಮಾಡಿದ್ದಾರೆ. 
 
ಆದರೆ ಈಗ ಸಿದ್ಧ ಆಗುತ್ತಿರುವ ಅನುಭವ ಮಂಟಪದಲ್ಲಿ ಬರಿ ಕನ್ನಡಿಗರು ಮಾತ್ರವಲ್ಲ ಬಾಲಿವುಡ್ ಕಲಾವಿದರು ಸಹಿತ ನಟಿಸುತ್ತಿದ್ದಾರೆ ಎನ್ನುವ ಮಾತನ್ನು ಹೇಳಿದ್ದಾರೆ ಶ್ರೀನಿವಾಸ ರಾಜು. ಹಲವು ವರ್ಷಗಳಿಂದ ಬಸವಣ್ಣನವರ ಬದುಕಿನ ಬಗ್ಗೆ ರಿಸರ್ಚ್ ಮಾಡಿ ಈಗ ಅಂತಿಮವಾಗಿ ಚಿತ್ರ ತಯಾರಿಸಲು ಸಿದ್ಧತೆ ನಡಿಸಿದ್ದಾರೆ ಮಿ . ರಾಜು! 
 
ಬಸವಣ್ಣ ಕನ್ನಡಿಗರ ಆಸ್ತಿಯಲ್ಲ. ಆದ್ದರಿಂದ ಈ ಚಿತ್ರದಲ್ಲಿ ಕನ್ನಡಿಗರು ಬಸವಣ್ಣನ ಪಾತ್ರವನ್ನು ಮಾಡುತ್ತಿಲ್ಲ ಎಂದು ಹೇಳುವುದರ ಮೂಲಕ ಹೊಸ ಮಿಂಚು ಮೂಡಿಸಿದ್ದು, ಅಕ್ಕಮಹಾದೇವಿಯ ನಟನೆಯನ್ನು ಸಹಿತ ಬಾಲಿವುಡ್ ಕಲಾವಿದೆಯೇ ಮಾಡ್ತಾರಂತೆ ಎಂದು ಹೇಳಿದ್ದಾರೆ. ಈ ಚಿತ್ರ ಕೇವಲ ಕನ್ನಡ ಮಾತ್ರವಲ್ಲ ತೆಲುಗು, ತಮಿಳು, ಹಿಂದಿ, ಮಲೆಯಾಳಂ ಭಾಷೆಗಳಲ್ಲೂ ಸಹಿತ ಬಿಡುಗಡೆ ಆಗುತ್ತದೆಯಂತೆ.
 

ವೆಬ್ದುನಿಯಾವನ್ನು ಓದಿ