ಮಲ್ಲಿಕಾ ಶರಾವತ್ ಡರ್ಟಿ ಪಾಲಿಟಿಕ್ಸ್‌ಗೆ ಅಡ್ಡಿ...?!

ಗುರುವಾರ, 5 ಮಾರ್ಚ್ 2015 (09:55 IST)
ಮಲ್ಲಿಕಾ ಶರಾವತ್ ನಟಿಸಿರುವ ಡರ್ಟಿ ಪಾಲಿಟಿಕ್ಸ್ ಸಹ ಹೆಚ್ಚು ಗಮನ ಸೆಳೆಯುತ್ತಿರುವ ಚಿತ್ರವಾಗಿದೆ. ಆ ಚಿತ್ರಕ್ಕೆ ಸಂಬಂಧಪಟ್ಟಂತೆ ಸ್ಟೇ ಆರ್ಡರ್ ನೀಡಿತ್ತು ಕೋರ್ಟ್. ಈ ಬಗ್ಗೆ ಹೇಳುವುದಾದರೆ ಒಬ್ಬ ಹಳ್ಳಿ ಹುಡುಗಿ ಹೇಗೆ ರಾಜಕೀಯ ರಂಗದಲ್ಲಿ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಳ್ಳುತ್ತಾಳೆ ತನ್ನ ಚಾತುರ್ಯ ಹಾಗೂ ಸಾಮರ್ಥ್ಯದಿಂದ ಎನ್ನುವ ಸಂಗತಿಗಳನ್ನು ಒಳಗೊಂಡಿದೆ ಈ ಚಿತ್ರ. ಆದರೆ ಆ ಚಿತ್ರ ಬಿಡುಗಡೆಯ ದಿನಗಳು ಹತ್ತಿರ ಬಂದ ತಕ್ಷಣ ಬಿಡುಗಡೆ ಮಾಡ ಬಾರದೆಂದು ಪಾಟ್ನ ಹೈ ಕೋರ್ಟ್ ಕಡೆಯಿಂದ ಸ್ಟೇ ಆರ್ಡರ್  ಬಂದಾಗ ಚಿತ್ರದವರ ಪರಿಸ್ಥಿತಿಯ ಬಗ್ಗೆ ವಿವರಿಸ ಬೇಕಿಲ್ಲ. ಆದರೆ ಆ ಆತಂಕ ಈಗ ದೂರವಾಗಿದೆ. ಪಾಟ್ನಾ ಹೈ ಕೋರ್ಟ್ ಕ್ಲೀನ್ ಚಿಟ್ ನೀಡಿದೆ. 
ಈ ಚಿತ್ರದ ನಿರ್ಮಾಪಕ-ನಿರ್ದೇಶಕ ಕೆಸಿ ಬೊಕಾಡಿಯ ಅವರು ಕೋರ್ಟ್‌ಗೆ ಬರಹ ರೂಪದಲ್ಲಿ ಇರುವ ನೋ ಅಬ್ಜಕ್ಶನ್  ಸನ್ನಿವೇಶಗಳ ಸರ್ಟಿಫಿಕೇಟ್ ಸಲ್ಲಿದರು. ಸೆಂಟ್ರಲ್ ಬೋರ್ಡ್ ಆಫ್ ಸಿನಿಮಾ ಸರ್ಟಿಫಿಕೇಟ್ ಯಾವುದೇ ದೃಶ್ಯದ ಕತ್ತರಿಸುವಿಕೆ ಮತ್ತು ಅಂಟಿಸುವಿಕೆಯ ಅಗತ್ಯ ಇಲ್ಲ ಎನ್ನುವ ಸಂಗತಿಯನ್ನು ಒಳಗೊಂಡ ಸಂಗತಿಯನ್ನು ತಿಳಿಸಿ ನೀಡಿದ್ದ ಸರ್ಟಿಫಿಕೇಟ್‌ನ್ನು ಕೋರ್ಟಿಗೆ ಸಲ್ಲಿಸಿದರು ಬೊಕಾಡಿಯ. ಈ ಸಂಗತಿಯನ್ನು ಬೊಕಾಡಿಯ ಅವರ ವಕೀಲ ಅನಿಲ್ ಕುಮಾರ್ ಸಿನ್ಹ ಅವರು ಕೋರ್ಟ್ ಗೆ ತಿಳಿಸಿದ್ದಾರೆ. ಬೊಕಾಡಿಯ ನಾನು ಕೋರ್ಟ್ ಬಳಿ ನೋ ಅಬ್ಜಕ್ಶನ್ ಸೀನ್‌ಗಳನ್ನೂ ಹೊಂದಿರುವ ಸರ್ಟಿಫಿಕೇಟ್ ಹೊಂದಿರುವುದಾಗಿ ತಿಳಿಸಿ ಅದನ್ನು ಕೋರ್ಟ್‌ಗೆ ನೀಡಿದೆ ಎಂದು ಮಾಧ್ಯಮಗಳಿಗೆ ಮುಂಬೈನಲ್ಲಿ ತಿಳಿಸಿದ್ದಾರೆ. ಈ ಚಿತ್ರ ನಾಳೆ ಬಿಡುಗಡೆ ಆಗುತ್ತಿದೆ. 

ವೆಬ್ದುನಿಯಾವನ್ನು ಓದಿ