ವಿಚ್ಚೇಧನ ಬೆನ್ನಲ್ಲೇ ರೆಹಮಾನ್ ಬಗ್ಗೆ ಅದೆಂತಹ ಮಾತು ಆಡಿದ್ರು ವಿಚ್ಚೇದಿತ ಪತ್ನಿ ಸಾಯಿರಾ

Sampriya

ಭಾನುವಾರ, 24 ನವೆಂಬರ್ 2024 (17:17 IST)
ಮುಂಬೈ: ಖ್ಯಾತ ಗಾಯಕ ಎಆರ್‌ ರೆಹಮಾನ್ ಜತೆಗಿನ 29 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಬೆನ್ನಲ್ಲೇ ತಮ್ಮ ಮಾಜಿ ಪತಿಯ ಬಗ್ಗೆ ವಿಚ್ಛೇದಿತ ಪತ್ನಿ ಸಾಯಿರಾ ಅವರು ಗುಣಗಾನ ಮಾಡಿದ್ದಾರೆ.  

ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡ ಸಾಯಿರಾ ಅವರು, ರೆಹಮಾನ್ ಅವರು ಒಳ್ಳೆಯ ವ್ಯಕ್ತಿ. ನನ್ನ ಜೀವನದಲ್ಲಿ ಯಾರನ್ನಾದರೂ ನಂಬುತ್ತೇನೆ ಎಂದರೆ ಅದು ಅವರನ್ನು ಮಾತ್ರ ಎಂದು ಹೇಳಿದ್ದಾರೆ.  

ನಾನು ಚಿಕಿತ್ಸೆಗಾಗಿ ಚೆನ್ನೈನಿಂದ ಹೊರಟಿದ್ದೇನೆ. ಆರೋಗ್ಯದ ಕಾರಣಗಳಿಂದ ರೆಹಮಾನ್‌ ಅವರಿಂದ ತುಸು ವಿರಾಮ ತೆಗೆದುಕೊಂಡಿದ್ದೇನೆ. ಚಿಕಿತ್ಸೆ ಪಡೆದು ಚೆನ್ನೈಗೆ ಹಿಂತಿರುಗಿದ ಬಳಿಕ ಎಲ್ಲಾ ವಿಷಯಗಳನ್ನು ಸ್ಪಷ್ಟಪಡಿಸುತ್ತೇನೆ ಎಂದು ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ತನ್ನನ್ನು ಮತ್ತು ತಮ್ಮ ಕುಟುಂಬದವರನ್ನು ಗುರಿಯಾಗಿಸಿಕೊಂಡು ಮಾನನಷ್ಟ ಮತ್ತು ಆಕ್ಷೇಪಾರ್ಹ ವಿಚಾರಗಳನ್ನು ಪೋಸ್ಟ್‌ ಮಾಡುವವರ ವಿರುದ್ಧ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುವುದಾಗಿ 57 ವರ್ಷದ ಎ.ಆರ್. ರೆಹಮಾನ್ ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ವೊಂದನ್ನು ಶನಿವಾರ ಹಂಚಿಕೊಂಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ