‘ದಿಯಾ’ ನಾಯಕ ಪೃಥ್ವಿ ಅಂಬರ್ ಗೆ ಈಗ್ಲಾದ್ರೂ ಲವ್ವರ್ ಸಿಗ್ತಾಳಾ?!

ಸೋಮವಾರ, 10 ಆಗಸ್ಟ್ 2020 (13:31 IST)
ಬೆಂಗಳೂರು: ದಿಯಾ ಚಿತ್ರದ ಮೂಲಕ ಗಮನ ಸೆಳೆದಿದ್ದ ಯಂಗ್ ಹೀರೋ ಪೃಥ್ವಿ ಅಂಬರ್ ಈಗ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಇದೂ ಕೂಡಾ ಲವ್ ಸ್ಟೋರಿ.


ವಿಶೇಷವೆಂದರೆ ಈ ಸಿನಿಮಾದಲ್ಲೂ ಪೃಥ್ವಿ ದಿಯಾ ಹೀರೋಯಿನ್ ಖುಷಿ ರವಿ ಜತೆಯಾಗುತ್ತಿದ್ದಾರೆ. ದಿಯಾ ಸಿನಿಮಾದಲ್ಲಿ ಈ ಇಬ್ಬರೂ ಜೋಡಿ ಕೊನೆಗೂ ಒಂದಾಗಲೇ ಇಲ್ಲ.

ಕನಿಷ್ಠ ಪಕ್ಷ ಈ ಸಿನಿಮಾದಲ್ಲಾದರೂ ಈ ಜೋಡಿ ಒಂದಾಗಲಿ ಎಂದು ಅಭಿಮಾನಿಗಳು ಈಗ ಹಾರೈಸುತ್ತಿದ್ದಾರೆ. ಮುಂದಿನ ವರ್ಷ ಈ ಚಿತ್ರ ಸೆಟ್ಟೇರುವ ನಿರೀಕ್ಷೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ