'ಕೊಡೆ ಮುರುಗ'ದಲ್ಲಿ ಹೀರೋ ಎಂಟ್ರಿ ಹೇಗಿರುತ್ತೆ ಗೊತ್ತಾ..?

ಶುಕ್ರವಾರ, 31 ಜನವರಿ 2020 (14:14 IST)
ಇಷ್ಟು ದಿನ ನೋಡಿದ ಸಿನಿಮಾದಲ್ಲಿ ನಾಯಕನ ಎಂಟ್ರಿ ಹೇಗಿರ್ತಾ ಇತ್ತು. ಒಂದೊಳ್ಳೆ ಹೀರೋಯಿಸಂ ಸಾಂಗ್ ಮೂಲಕ ಅಥವಾ ಯಾರನ್ನಾದರುಯ ರಕ್ಷಿಸುವ ಮೂಲಕ. ಆದ್ರೆ ಇಲ್ಲೊಂದು ಸಿನಿಮಾದಲ್ಲಿ ಅಪಹಾಸ್ಯ ಮಾಡುತ್ತಾ, ಬೈಗುಳಾ ತಿನ್ನುತ್ತಾ ಹೀರೋ ಎಂಟ್ರಿ ಕೊಡ್ತಿದ್ದಾರಂತೆ. ಏನಿದು ವಿಚಿತ್ರವಾಗಿದೆ ಅಂತಿರಾ. ವಿಚಿತ್ರ ಅಲ್ಲ ವಿಭಿನ್ನ. ಎಸ್ ಆ ಸಿನಿಮಾದ ಹೆಸರು 'ಕೊಡೆ ಮುರುಗ'.
ಧಾರಾವಾಹಿ ಪ್ರಿಯರಾಗಿದ್ರೆ ಮುರುಗ ಎಂದಾಕ್ಷಣ 'ಅಗ್ನಿಸಾಕ್ಷಿ' ಕಡೆ ಥಟ್ ಅಂತ ಗಮನ ಹೋಗಿರುತ್ತೆ. ಹಾಗೇ ಹೋದ್ರೆ ತಪ್ಪಲ್ಲ. ಯಾಕಂದ್ರೆ ಆ ಧಾರಾವಾಹಿಯ ಮುರುಗನೇ ಈ ಸಿನಿಮಾದಲ್ಲಿಯೂ ಮುಖ್ಯ ಪಾತ್ರಧಾರಿಯಾಗಿದ್ದಾರೆ. ನೆಗೆಟೀವ್ ಶೇಡ್ ನಲ್ಲಿ ಎಲ್ಲರ ಕೈನಲ್ಲೂ ಬೈಗುಳ ತಿನ್ನುತ್ತಾ, ಹೀರೋ ಥರ ಆಡೋದು. ಆದ್ರೆ ಮುರುಗನದ್ದು ಹೀರೋ ಪಾತ್ರ ಅಲ್ಲ. ಹಾಗಾದ್ರೆ ಏನು ಅನ್ನೋದನ್ನ ತಿಳಿದುಕೊಳ್ಳೋ ಕುತೂಹಲ ನಿಮಗಿದೆಯಾ..ನನಗೂ ಆ ಕ್ಯೂರಿಯಾಸಿಟಿ ಇದೆ. ಇವೆಲ್ಲದಕ್ಕುಯ ಉತ್ತರವನ್ನು ಸಿನಿಮಾದಲ್ಲೇ ತಿಳಿದುಕೊಳ್ಳಬೇಕು. ಆದ್ರೆ ಸಮಾಜಕ್ಕೊಂದು ಉತ್ತಮ ಸಂದೇಶ ಸಿನಿಮಾದಲ್ಲಿದೆ ಅನ್ನೋದು ಚಿತ್ರತಂಡದ ಮಾತು.
 
ಈ ಸಿನಿಮಾ ಸಾಕಷ್ಟು ವಿಶೇಷತೆಯನ್ನ ಹೊಂದಿದೆ. ಟೈಟಲ್, ಸಾಂಗ್ ಹೀಗೆ ಎಲ್ಲದರಲ್ಲೂ ಹಲವಾರು ವಿಶೇಷತೆಯಿಂದ ಕೂಡಿದ್ದು, ಥಿಯೇಟರ್ ಬಾಗಿಲಿಗೆ ಬಂದ ಪ್ರೇಕ್ಷಕರಿಗೆ ಒಂದೊಳ್ಳೆ ಮೆಸೇಜ್ ನೀಡಲಿದೆ. ನಿರ್ದೇಶನದ ಜೊತೆಗೆ ಸುಬ್ರಹ್ಮಣ್ಯ ಪ್ರಸಾದ್ ಕೂಡ ಮತ್ತೊಬ್ಬ ನಾಯಕನ ಪಾತ್ರವನ್ನ ಮಾಡಿದ್ದಾರೆ. ಸಿನಿಮಾದ ಟೈಟಲ್ ವಿಚಾರವಾಗಿ ತುಂಬಾ ಸದ್ದು ಮಾಡಿದೆ. ವಿಭಿನ್ನವಾದ ಟೈಟಲ್ ಅನ್ನೋದು ಒಂದು ಕಡೆಯಾದ್ರೆ, ಖಳನಾಯಕನ ಹೆಸರನ್ನೇ ಟೈಟಲ್ ಆಗಿ ಇಟ್ಟಿದ್ದಾರೆ. ಅದು ಎಲ್ಲರಿಗೂ ಕುತೂಹಲಕ್ಕೆ ಕಾರಣವಾಗಿದೆ. ಯಾಕಂದ್ರೆ ಇಲ್ಲಿವರೆಗೂ ನೋಡಿದ ಸಿನಿಮಾಗಳ ಟೈಟಲ್ ನಾಯಕನ ಪ್ರಭಾವವನ್ನ ತೋರಿಸ್ತಾ ಇತ್ತು. ಇದು ಹೇಗೆ ಎಂಬ ಪ್ರಶ್ನೆಗಳು ಮೂಡುತ್ತವೆ. ಹೀಗಾಗಿ ಇದಕ್ಕೆಲ್ಲ ಉತ್ತರ ಸಿಗಬೇಕೆಂದರೆ ಮಾರ್ಚ್ ತನಕ ಕಾಯಲೇ ಬೇಕಾಗಿದೆ.
 
ಈ ಹಿಂದೆ ಮಮ್ಮಿ ಎಂಬ ಸೂಪರ್ ಸಿನಿಮಾ ನೀಡಿದ್ದ ಕೆ ಆರ್ ಕೆ ಬ್ಯಾನರ್ ನಲ್ಲಿ ಕೆ ರವಿಕುಮಾರ್ ಅವರೇ 'ಕೊಡೆ ಮುರುಗ' ಸಿನಿಮಾವನ್ನು ತಯಾರಿಸಿದ್ದಾರೆ. ರವಿಕುಮಾರ್ ಗೆ ಅಶೋಕ್ ಶಿರಾಲಿ ಸಾಥ್ ನೀಡಿದ್ದಾರೆ. ಸುಬ್ರಮಣ್ಯ ಪ್ರಸಾದ್ ನಾಯಕರಾಗಿದ್ದು, ಕಥೆ ಬರೆದು ಅವರೇ ನಿರ್ದೇಶನ ಕೂಡ ಮಾಡಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿಯ ಮುರುಗ ಮತ್ತೊಬ್ಬ ನಟನಾಗಿ ಸಿನಿಮಾದಲ್ಲಿ ಮಿಂಚಿದ್ದಾರೆ. ಉಳಿದಂತೆ ಪಲ್ಲವಿ ಗೌಡ, ಸ್ವಾತಿ ಗುರುದತ್, ತುಮಕೂರು ಮೋಹನ್, ರಂಗಿತರಂಗ ಅರವಿಂದ್, ಕುರಿ ಪ್ರತಾಪ್ ಸೇರಿದಂತೆ ಅನೇಕರು ತಾರಾಬಳಗದಲ್ಲಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದರೆ ಮಾರ್ಚ್ ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ