ವಕೀಲ್ ಸಾಬ್ ಚಿತ್ರದ ಟ್ರೈಲರ್ ಗೆ ಸಿಕ್ಕಿದ ಲೈಕ್ಸ್ ಎಷ್ಟು ಗೊತ್ತಾ?

ಬುಧವಾರ, 31 ಮಾರ್ಚ್ 2021 (10:44 IST)
ಹೈದರಾಬಾದ್ : ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ  ‘ವಕೀಲ್ ಸಾಬ್’ ಚಿತ್ರದ ಟ್ರೈಲರ್ ಮಾರ್ಚ್ 29ರಂದು ರಿಲೀಸ್ ಮಾಡಲಾಗಿದೆ.

ಈ ಟ್ರೈಲರ್  7 ನಿಮಿಷಗಳಲ್ಲಿ 100ಕೆ ಲೈಕ್ ಗಳನ್ನು ಮತ್ತು 236 ನಿಮಿಷಗಳಲ್ಲಿ 658 ಕೆ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ ಎಂಬುದಾಗಿ ತಿಳಿದುಬಂದಿದೆ. ಈ ಬಗ್ಗೆ ಚಿತ್ರದ ಸಂಗೀತ ಸಂಯೋಜಕ ಥಮನ್ ಟ್ವೀಟರ್ ನಲ್ಲಿ ಪೋಸ್ಟ್ ನ್ನು ಹಂಚಿಕೊಳ್ಳುವ ಮೂಲಕ ತಿಳಿಸಿದ್ದಾರೆ.

ವಕೀಲ್ ಸಾಬ್ ಬಾಲಿವುಡ್ ನ ಪಿಂಕ್ ಚಿತ್ರದ ರಿಮೇಕ್ ಆಗಿದ್ದು, ಈ ಚಿತ್ರದ ಮೂಲಕ ಪವನ್ ಕಲ್ಯಾಣ ಚಿತ್ರರಂಗಕ್ಕೆ ಮರುಪ್ರವೇಶ ಮಾಡಿದ್ದಾರೆ ಎನ್ನಲಾಗಿದೆ. ಹಾಗಾಗಿ ಈ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ