ಹೈದರಾಬಾದ್ ಹೋಟೆಲ್ ನಲ್ಲಿ ಕನ್ನಡ ಚಾನೆಲ್ ಬಾರದೇ ಇದ್ದದಕ್ಕೆ ದರ್ಶನ್ ಮಾಡಿದ್ದೇನು ಗೊತ್ತಾ...?
ಭಾನುವಾರ, 7 ಜನವರಿ 2018 (06:42 IST)
ಬೆಂಗಳೂರು : ಜನರು ನಿರೀಕ್ಷೆಯಿಂದ ಕಾಯುತ್ತಿರುವ ಕುರುಕ್ಷೇತ್ರ ಚಿತ್ರದ ಶೂಟಿಂಗ್ ಹೈದರಾಬಾದ್ ನಲ್ಲಿ ನಡೆಯುತ್ತಿದ್ದ ಸಂದರ್ಭದಲ್ಲಿ ಶೂಟಿಂಗ್ ಬ್ರೇಕಿಂಗ್ ಇದ್ದಾಗ ದರ್ಶನ್ ಅವರು ಹೋಟೆಲ್ ಒಂದಕ್ಕೆ ತೆರಳಿದ್ದು ಅಲ್ಲಿನ ಮಾಲೀಕರ ಮೇಲೆ ಕೋಪಗೊಂಡ ಘಟನೆ ನಡೆದಿದೆ.
ಕುರುಕ್ಷೇತ್ರ ಚಿತ್ರದ ಶೂಟಿಂಗ್ ಹೈದರಾದಾದ್ ನ ರಾಮೋಜಿರಾವ್ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದ್ದು , ಆ ವೇಳೆ ಶೂಟಿಂಗ್ ಗೆ ಸ್ವಲ್ಪ ಹೊತ್ತು ಬ್ರೇಕ್ ಇದುದ್ದರಿಂದ ದರ್ಶನ್ ಅವರು ಚಿತ್ರ ತಂಡದವರೊಂದಿಗೆ ಅಲ್ಲಿನ ಸ್ಥಳಿಯ ಹೋಟೆಲ್ ಒಂದಕ್ಕೆ ತೆರಳಿದ್ದಾರೆ. ಅಲ್ಲಿ ಕನ್ನಡ ಚಾನಲ್ ಗಳು ಬರದ ಕಾರಣ ಹೋಟೆಲ್ ಮಾಲೀಕರ ಮೇಲೆ ಗರಂ ಆಗಿದ್ದಾರೆ. ಅಲ್ಲಿ ಕನ್ನಡ ಬಿಟ್ಟು ಎಲ್ಲಾ ಬೇರೆ ಭಾಷೆಯ ಚಾನಲ್ ಗಳನ್ನು ಕಂಡ ದರ್ಶನ್ ಅವರು ಅಲ್ಲಿನ ಸಿಬ್ಬಂದಿಗಳಿಗೆ ಹೇಳಿ ಕನ್ನಡ ಚಾನಲ್ ಗಳನ್ನು ಹಾಕಿಸಿಕೊಂಡು ನೋಡಿ ಖುಷಿಪಟ್ಟರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ