ಡಾಲಿ ಧನಂಜಯ್ ಲವ್ಸ್ ಅಮೃತಾ ಕನ್ ಫರ್ಮ್ ಎಂದ ಅಭಿಮಾನಿಗಳು!

ಮಂಗಳವಾರ, 26 ಜುಲೈ 2022 (17:08 IST)
ಬೆಂಗಳೂರು: ಇಂದು ನಟಿ ಅಮೃತಾ ಅಯ್ಯಂಗಾರ್ ಹುಟ್ಟುಹಬ್ಬವಾಗಿದ್ದು, ಹುಟ್ಟುಹಬ್ಬಕ್ಕೆ ಡಾಲಿ ಧನಂಜಯ್ ವಿಶ್ ಮಾಡಿದ್ದಾರೆ.
 

ಡಾಲಿ-ಅಮೃತಾ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂದು ಕೆಲವು ದಿನಗಳ ಮೊದಲು ಗಾಸಿಪ್ ಹಬ್ಬಿತ್ತು. ಇದಕ್ಕೆ ಅಮೃತಾ ಅದೆಲ್ಲಾ ಸುಳ್ಳು ಎಂದಿದ್ದರು. ಹಾಗಿದ್ದರೂ ಈ ಜೋಡಿ ಮತ್ತೆ ಈಗ ತೆರೆ ಮೇಲೆ ಹೊಯ್ಸಳ ಸಿನಿಮಾದಲ್ಲಿ ಒಂದಾಗುತ್ತಿದ್ದಾರೆ. ಜೊತೆಗೆ ಇಂದು ಅಮೃತಾ ಹುಟ್ಟುಹಬ್ಬಕ್ಕೆ ಹೊಯ್ಸಳ ವಿಶೇಷ ಪೋಸ್ಟರ್ ಬಿಡುಗಡೆ ಮಾಡಿರುವುದಲ್ಲದೆ, ಡಾಲಿ ಧನಂಜಯ್ ತಮ್ಮಿಬ್ಬರ ಸುಂದರ ಕ್ಷಣದ ಫೋಟೋ ಪ್ರಕಟಿಸಿ ವಿಶ್ ಮಾಡಿದ್ದಾರೆ.

ಇದನ್ನು ಗಮನಿಸಿರುವ ಅಭಿಮಾನಿಗಳು ಡಾಲಿ ಲವ್ಸ್ ಅಮೃತಾ ಕನ್ ಫರ್ಮ್ ಆಯ್ತು. ಮದುವೆ ಯಾವಾಗ ಮಾಡಿಕೊಳ್ತೀರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ