ಮಲ್ಲಿಗೆ ಹೂವಿನಿಂದಾಗಿ 1 ಲಕ್ಷ ದಂಡ ಕಟ್ಟಿದ ನಟಿ ನವ್ಯಾ ನಾಯರ್
ಕಾರ್ಯಕ್ರಮವೊಂದಕ್ಕೆಂದು ನವ್ಯಾ ಆಸ್ಟ್ರೇಲಿಯಾಕ್ಕೆ ತೆರಳಿದ್ದರು. ಕಾರ್ಯಕ್ರಮದಲ್ಲಿ ಭಾಗಿಯಾಗುವಾಗ ಇರಲಿ ಎಂದು ನವ್ಯಾ 1 ಗೇಣು ಹೂವಿನೊಂದಿಗೆ ವಿಮಾನವೇರಿದ್ದರಂತೆ. ಆದರೆ ಮೆಲ್ಬರ್ನ್ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಅವರನ್ನು ತಡೆದಿದ್ದಾರೆ.
ಆಸ್ಟ್ರೇಲಿಯಾದ ನಿಯಮದ ಪ್ರಕಾರ ಜೈವಿಕ ಅಪಾಯಗಳನ್ನು ತಡೆಯುವ ನಿಟ್ಟಿನಿಂದ ಯಾವುದೇ ಸಸ್ಯದ ಭಾಗವನ್ನಾದರೂ ವಿದೇಶದಿಂದ ತರಬೇಕಾದರೆ ಮೊದಲೇ ಅನುಮತಿ ಪಡೆಯಬೇಕು. ಆದರೆ ಇದರ ಬಗ್ಗೆ ನವ್ಯಾಗೆ ಬಹುಶಃ ಮಾಹಿತಿಯಿರಲಿಲ್ಲ.
ಹೀಗಾಗಿ 1 ಗೇಣು ಮಲ್ಲಿಗೆ ತೆಗೆದುಕೊಂಡಿದ್ದಕ್ಕೆ 1.14 ಲಕ್ಷ ರೂ. ದಂಡ ವಿಧಿಸಲಾಗಿದೆ. ಆಸ್ಟ್ರೇಲಿಯಾದ ಕಾರ್ಯಕ್ರಮವೊಂದರಲ್ಲಿ ಅವರು ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.