ಭರ್ಜರಿ ಪ್ರಮೋಷನ್ ಕೆಲಸದಲ್ಲಿ ತೊಡಗಿರುವ ಡವ್ ಸಿನೆಮಾ ತಂಡ

ಮಂಗಳವಾರ, 6 ಅಕ್ಟೋಬರ್ 2015 (10:59 IST)
ಕನ್ನಡದಲ್ಲಿ ಸದ್ಯ ಸಿನಿಮಾ ಹಿನ್ನೆಲೆಯುಳ್ಳವರ ಮಕ್ಕಳು ಸಿನಿಮಾ ರಂಗಕ್ಕೆ ಬರೋದು ಮಾಮೂಲಾಗಿ ಬಿಟ್ಟಿದೆ. ಅದೇ ಸರದಿಯೀಗ ಸಾ ರಾ ಗೋವಿಂದ್ ಪುತ್ರ ಅನೂಪ್ ಅವರದ್ದು. ಅನೂಪ್ ಡವ್ ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಡವ್ ಸಿನಿಮಾ ತಂಡ ಸೂಟಿಂಗ್ ಮುಗಿಸಿ ಸಿನಿಮಾದ ಪ್ರಮೋಷನ್ ಕಾರ್ಯದಲ್ಲಿ ಕೊಡಗಿದೆ.
ಡವ್ ಸಿನಿಮಾ ತಂಡ ಈ ಹಿಂದೆ ವಾಸ್ಕೋಡಿಗಾಮಾ ಸಿನಿಮಾ ತಂಡ ಮಾಡಿದ ರೀತಿಯಲ್ಲೇ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಕಾಲೇಜುಗಳಲ್ಲೇ ಸಿನಿಮಾದ ಪ್ರಚಾರ ಕಾರ್ಯವನ್ನು ನಡೆಸುತ್ತಿದೆ.. ಈಗಾಗಲೇ ಬೆಂಗಳೂರಿನ ಶೇಷಾದಿಪುರಂ ಕಾಲೇಜಿನಿಂದ ಸಿನಿಮಾ ತಂಡ ಪ್ರಚಾರ ಕಾರ್ಯ ಆರಂಭಿಸಿದೆ. ಸಿನಿಮಾ ನಾಯಕ ನಾಯಕಿಯರಾದ ಅನೂಪ್ ಹಾಗೂ ಅದಿತಿ ಇಬ್ಬರೂ ಇದೇ ಕಾಲೇಜಿನ ವಿದ್ಯಾರ್ಥಿಗಳು. ಹಾಗಾಗಿ ಇಲ್ಲಿಂದಲೇ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.
 
ಒಚ್ಚು ರಾಜ್ಯದ 120 ಕಾಲೇಜುಗಳಲ್ಲಿ ಈ ಸಿನಿಮಾ ಪ್ರಮೋಷನ್ ನಡೆಸಲಿದೆ. ಸಿನಿಮಾ ಕಾಲೇಜಿನ ಸುತ್ತ ಹೆಣೆದಿರುವ ಕಥೆಯಾದ್ದರಿಂದ ಕಾಲೇಜುಗಳಲ್ಲಿ ಸಿನಿಮಾದ ಪ್ರಚಾರ ಕಾರ್ಯವನ್ನು ಮಾಡಲಾಗುತ್ತಿದೆ. ಈ ಸಿನಿಮಾವನ್ನು ಅಲೆಮಾರಿ ಸಂತು ನಿರ್ದೇಶಿಸಿದ್ದಾರೆ. ಸಾ ರಾ ಗೋವಿಂದ್ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ.

ವೆಬ್ದುನಿಯಾವನ್ನು ಓದಿ