ಅಣ್ಣಾವ್ರ ಬರ್ತ್ ಡೇ: ಸಮಾಧಿಗೆ ಕುಟುಂಬಸ್ಥರಿಂದ ಪೂಜೆ, ಯಾರೆಲ್ಲಾ ಬಂದಿದ್ರು ನೋಡಿ

Krishnaveni K

ಗುರುವಾರ, 24 ಏಪ್ರಿಲ್ 2025 (11:52 IST)
Photo Credit: X
ಬೆಂಗಳೂರು: ಇಂದು ವರನಟ ಡಾ ರಾಜ್ ಕುಮಾರ್ ಅವರ ಜನ್ಮ ಜಯಂತಿಯಾಗಿದ್ದು, ಈ ಪ್ರಯುಕ್ತ ಕುಟುಂಬಸ್ಥರು ಕಂಠೀರವ ಸ್ಟುಡಿಯೋದಲ್ಲಿರುವ ಡಾ ರಾಜ್ ಸ್ಮಾರಕದಲ್ಲಿ ಪೂಜೆ ಸಲ್ಲಿಸಿದ್ದಾರೆ. ಪೂಜೆಯಲ್ಲಿ ಯಾರೆಲ್ಲಾ ಭಾಗಿಯಾದ್ರು ನೋಡಿ.

ಪ್ರತೀ ವರ್ಷ ಅಣ್ಣಾವ್ರ ಹುಟ್ಟುಹಬ್ಬವನ್ನು ಅಭಿಮಾನಿಗಳು ಉತ್ಸವದಂತೆ ಆಚರಿಸುತ್ತಾರೆ. ಇಂದೂ ಅಭಿಮಾನಿ ದೇವರುಗಳು ಅಣ್ಣಾವ್ರ ಸಮಾಧಿ ಮುಂದೆ ಜಮಾಯಿಸಿದ್ದಾರೆ. ಅಣ್ಣಾವ್ರ ಸಮಾಧಿಯನ್ನು ಹೂವುಗಳಿಂದ ಅಲಂಕರಿಸಲಾಗಿದೆ.

ಇಂದು ಬೆಳಿಗ್ಗೆಯೇ ಡಾ ರಾಜ್ ಕುಟುಂಬಸ್ಥರು ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಎಂದಿನಂತೆ ರಾಘವೇಂದ್ರ ರಾಜ್ ಕುಮಾರ್ ನೇತೃತ್ವದಲ್ಲಿ ಪೂಜೆ ನಡೆದಿದೆ. ರಾಘಣ್ಣ ಪತ್ನಿ, ಪುತ್ರರು, ಅಶ್ವಿನಿ ಪುನೀತ್ ರಾಜ್ ಕುಮಾರ್,  ಮಕ್ಕಳು, ಸಹೋದರಿಯರು ಪಾಲ್ಗೊಂಡಿದ್ದಾರೆ. ಅಣ್ಣಾವ್ರು 97 ನೇ ಜನ್ಮ ಜಯಂತಿ ಇದಾಗಿದೆ. ಪೂಜೆ ಬಳಿಕ ಕುಟುಂಬಸ್ಥರು ಅಲ್ಲಿ ನೆರೆದಿದ್ದ ಅಭಿಮಾನಿಗಳು ಅನ್ನಸಂತರ್ಪಣೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ