Darshan Thoogudeepa: ತೋಟದ ಮನೆಯಲ್ಲಿ ಎತ್ತಿನ ಗಾಡಿ ಮೇಲೆ ನಟ ದರ್ಶನ್ ಫುಲ್ ಮಜಾ Video

Krishnaveni K

ಬುಧವಾರ, 23 ಏಪ್ರಿಲ್ 2025 (12:10 IST)
ಮೈಸೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ಆರೋಪಿ ನಟ ದರ್ಶನ್ ಇದೀಗ ಮೈಸೂರಿನ ತಮ್ಮ ತೋಟದ ಮನೆಯಲ್ಲಿ ಎತ್ತಿನ ಗಾಡಿ ಬಿಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

ನಟ ದರ್ಶನ್ ಇದೀಗ ಮೈಸೂರಿನ ವಿನೇಶ್ ಸ್ಟಡ್ ಫಾರ್ಮ್ ಹೌಸ್ ನಲ್ಲಿ ಕಾಲ ಕಳೆಯುತ್ತಿದ್ದಾರೆ. ತಮ್ಮ ಸಂಗಡಿಗರೊಂದಿಗೆ ಫಾರ್ಮ್ ಹೌಸ್ ನಲ್ಲಿ ಮೆಚ್ಚಿನ ಪ್ರಾಣಿಗಳ ಜೊತೆ ಕಾಲ ಕಳೆಯುತ್ತಿದ್ದಾರೆ.

ಈ ನಡುವೆ ಅವರು ಎತ್ತಿನ ಗಾಡಿ ಹೊಡೆಯುತ್ತಿರುವ ಅಪರೂಪದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜಾಮೀನು ಪಡೆದು ಜೈಲಿನಿಂದ ಹೊರಬಂದ ಮೇಲೆ ದರ್ಶನ್ ಹೆಚ್ಚಾಗಿ ಬೆಂಗಳೂರು ಮನೆ ಮತ್ತು ಫಾರ್ಮ್ ಹೌಸ್ ನಲ್ಲಿಯೇ ಕಾಲ ಕಳೆಯುತ್ತಿದ್ದಾರೆ.

ಮೊನ್ನೆಯಷ್ಟೇ ನಿರ್ಮಾಪಕ ಬಿ ಸುರೇಶ್ ಮಗಳ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮದಲ್ಲಿ ಪತ್ನಿ ವಿಜಯಲಕ್ಷ್ಮಿ ಸಮೇತ ಹಾಜರಾಗಿದ್ದರು. ಇದೀಗ ಫಾರ್ಮ್ ಹೌಸ್ ನಲ್ಲಿರುವ ವಿಡಿಯೋ ವೈರಲ್ ಆಗಿದೆ.


ಹಲವು ದಿನಗಳ ನಂತರ ಎತ್ತಿನಗಾಡಿ ಓಡಿಸುತ್ತಿರುವ ಸರಳತೆಯ ಸಾಮ್ರಾಟ್ ಡಿಬಾಸ್ ????#DBoss #TheDevil @dasadarshan pic.twitter.com/i741tb7x7U

— Abhi DBoss (@AbhiDBoss_7999) April 23, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ