ಇನ್ನೂ ಮುಗಿದಿಲ್ಲ ದೃಶ್ಯಂ ಸಿನಿಮಾ ಸರಣಿ: ಪಾರ್ಟ್ 3 ಶೀಘ್ರದಲ್ಲೇ ಶುರು

ಬುಧವಾರ, 14 ಜೂನ್ 2023 (08:50 IST)
Photo Courtesy: Twitter
ತಿರುವನಂತಪುರಂ: ಮಲಯಾಳಂನಲ್ಲಿ ಭರ್ಜರಿ ಹಿಟ್ ಆಗಿದ್ದ ದೃಶ‍್ಯಂ ಸಿನಿಮಾ ಎರಡು ಪಾರ್ಟ್ ಗಳಲ್ಲಿ ಬಿಡುಗಡೆಯಾಗಿ ಭಾರೀ ಹಿಟ್ ಆಗಿತ್ತು.

ಸೂಪರ್ ಸ್ಟಾರ್ ಮೋಹನ್ ಲಾಲ್ ನಾಯಕರಾಗಿರುವ ಈ ಸಿನಿಮಾ ಬಳಿಕ ಕನ್ನಡ, ತೆಲುಗು, ತಮಿಳು, ಹಿಂದಿಗೂ ರಿಮೇಕ್ ಆಗಿತ್ತು. ಇಷ್ಟಕ್ಕೇ ದೃಶ‍್ಯಂ ಸಿನಿಮಾ ಸರಣಿ ಮುಗಿದಿಲ್ಲ.

ಇದೀಗ ಮೂರನೇ ಪಾರ್ಟ್ ಮಾಡಲು ತಯಾರಿ ನಡೆದಿದೆ. ಮಲಯಾಳಂ ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ಚಿತ್ರೀಕರಣವಾಗಲಿದೆ ಎನ್ನಲಾಗಿದೆ. ಮುಂದಿನ ವರ್ಷ ಚಿತ್ರೀಕರಣ ನಡೆಯಲಿದೆ. ಹಿಂದಿಯಲ್ಲಿ ಅಜಯ್ ದೇವಗನ್ ನಾಯಕರಾಗಿ ಅಭಿನಯಿಸಿದ್ದಾರೆ. ಜೀತು ಜೋಸೆಫ್ ಮೂಲ ನಿರ್ದೇಶಕ, ಕತೆಗಾರ. ಇದುವೇ ಚಿತ್ರದ ಕೊನೆಯ ಪಾರ್ಟ್ ಆಗಲಿದೆಯಂತೆ. ಹೀಗಾಗಿ ಮೂರನೇ ಭಾಗಕ್ಕೆ ಸಿನಿಮಾ ಕೊನೆಯಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ