ಸಿಂಪಲ್ ಆಗಿ ಎಂಗೇಜ್ ಆದ ಒಳ್ಳೆ ಹುಡುಗ ಪ್ರಥಮ್

ಮಂಗಳವಾರ, 13 ಜೂನ್ 2023 (11:29 IST)
Photo Courtesy: facebook
ಬೆಂಗಳೂರು: ಬಿಗ್ ಬಾಸ್‍ ವಿನ್ನರ್, ನಟ ಒಳ್ಳೆ ಹುಡುಗ ಪ್ರಥಮ್ ಸಿಂಪಲ್ ಆಗಿ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಸದ್ದಿಲ್ಲದೇ ಎಂಗೇಜ್ ಮೆಂಟ್ ಮಾಡಿಕೊಂಡ ಪ್ರಥಮ್ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಮೂಲಗಳ ಪ್ರಕಾರ ಇದು ಕುಟುಂಬದವರೇ ನಿಶ್ಚಿಯಿಸಿದ ಮದುವೆ.

ನನ್ನ ಎಂಗೇಜ್ ಮೆಂಟ್ ದೇಶದ ದೊಡ್ಡ ಸುದ್ದಿಯಲ್ಲ. ಆದರೆ ನನ್ನ ಇಷ್ಟಪಡುವ ಆತ್ಮೀಯರಿಗೆ ವಿಚಾರ ಹಂಚಿಕೊಳ್ಳೋಣ ಎಂದು ಈ ಮೂಲಕ ಹಂಚಿಕೊಳ್ಳುತ್ತಿದ್ದೇನೆ. ಮದುವೆ ಎಷ್ಟು ಅದ್ಧೂರಿಯಾಗಿ ಆದೆ ಎನ್ನುವುದಕ್ಕಿಂತ ಎಷ್ಟು ಚೆನ್ನಾಗಿ ಬದುಕು ಕಟ್ಟಿಕೊಂಡ್ವಿ ಎನ್ನುವುದೇ ನಿಜವಾದ ಸಾಧನೆ. ನನಗೆ ಹಾಗಿರೋಕೆ ಇಷ್ಟ. ಹರಸುವವರು ಅಲ್ಲಿಂದಲೇ ಹರಸಿ ಎಂದು ಬರೆದುಕೊಂಡಿದ್ದಾರೆ ಪ್ರಥಮ್. ಆದರೆ ತಮ್ಮ ಹುಡುಗಿಯ ಮುಖ, ಇತರ ವಿವರಗಳನ್ನು ಹಂಚಿಕೊಂಡಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ