ಬೆಂಗಳೂರು: ಡ್ರಗ್ ಮಾಫಿಯಾದಲ್ಲಿ ಬಂಧಿತರಾಗಿರುವ ನಟಿ ರಾಗಿಣಿ ದ್ವಿವೇದಿಯನ್ನು ಮೆಚ್ಚಿ ಪ್ರಪೋಸ್ ಮಾಡಿದ್ದನ್ನು ಇನ್ನೊಬ್ಬ ಆರೋಪಿ ಶಿವಪ್ರಕಾಶ್ ಅಲಿಯಾಸ್ ಚಿಪ್ಪಿ ಒಪ್ಪಿಕೊಂಡಿದ್ದಾರೆ.
ನಿನ್ನೆ ಆರೋಪಿ ಶಿವಪ್ರಕಾಶ್ ನನ್ನು ಸಿಸಿಬಿ ಪೊಲೀಸರು ವಿಚಾರಣೆಗೊಳಪಡಿಸಿದ್ದರು. ಈ ವೇಳೆ ರಾಗಿಣಿ ಜೊತೆಗಿನ ತನ್ನ ಸಂಬಂಧವನ್ನು ಬಾಯ್ಬಿಟ್ಟಿದ್ದಾನೆ. ರಾಗಿಣಿಯನ್ನು ಇಷ್ಟಪಟ್ಟು 2017 ರಲ್ಲಿ ಮದುವೆಯಾಗಲು ಪ್ರಪೋಸ್ ಮಾಡಿದ್ದೆ. ಆದರೆ ಅವರು ಸದ್ಯಕ್ಕೆ ವೃತ್ತಿ ಬಗ್ಗೆ ಯೋಚನೆ ಮಾಡುತ್ತೇನೆ ಎಂದಿದ್ದರು. ನಮ್ಮಿಬ್ಬರ ನಡುವೆ 16 ವರ್ಷ ಅಂತರವಿತ್ತು. ಹೀಗಾಗಿ ಇಬ್ಬರೂ ಒಪ್ಪಿಕೊಂಡು ದೂರವಾಗಿದ್ದೆವು ಎಂದಿದ್ದಾನೆ. ಆದರೆ ಡ್ರಗ್ ಪ್ರಕರಣದಲ್ಲಿ ತನ್ನನ್ನು ವಿನಾಕಾರಣ ಸಿಲುಕಿಸಲಾಗಿದೆ ಎಂದಿದ್ದಾನೆ ಎನ್ನಲಾಗಿದೆ.