ಟೋಬಿ ಮಲಯಾಳಂ ಸಿನಿಮಾಗೆ ದುಲ್ಕರ್ ಸಲ್ಮಾನ್ ಸಾಥ್

ಗುರುವಾರ, 21 ಸೆಪ್ಟಂಬರ್ 2023 (16:43 IST)
ಬೆಂಗಳೂರು: ರಾಜ್ ಬಿ ಶೆಟ್ಟಿ ಟೋಬಿ ಸಿನಿಮಾವನ್ನು ಕನ್ನಡದ ಬಳಿಕ ಈಗ ಮಲಯಾಳಂನಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ.

ಈಗಾಗಲೇ ನಾಳೆಯಿಂದ ಟೋಬಿ ಮಲಯಾಳಂ ವರ್ಷನ್ ಥಿಯೇಟರ್ ನಲ್ಲಿ ಬಿಡುಗಡೆಯಾಗುತ್ತಿದೆ. ಈಗಾಗಲೇ ರಾಜ್ ಬಿ ಶೆಟ್ಟಿ, ಹಾಡು, ಟ್ರೈಲರ್ ಬಿಡುಗಡೆ ಮಾಡಿದ್ದು, ಮಲಯಾಳಂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ.

ಈ ಸಿನಿಮಾದ ಮಲಯಾಳಂ ಅವತರಣಿಕೆ ಬಿಡುಗಡೆಗೆ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಸಾಥ್ ನೀಡುತ್ತಿದ್ದಾರೆ. ಟೋಬಿ ಮಲಯಾಳಂ ಸಿನಿಮಾದ ವಿತರಣೆ ಹಕ್ಕನ್ನು ದುಲ್ಕರ್ ಅವರ ನಿರ್ಮಾಣ ಸಂಸ್ಥೆ ಪಡೆದುಕೊಂಡಿದೆ. ದುಲ್ಕರ್ ಜೊತೆ ಮುಂದಿನ ದಿನಗಳಲ್ಲಿ ರಾಜ್ ಬಿ ಶೆಟ್ಟಿ ಸಿನಿಮಾವನ್ನೂ ಮಾಡಲಿದ್ದಾರೆ ಎಂಬ ಸುದ್ದಿಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ