ಟೋಬಿ ಚೆನ್ನಾಗಿಲ್ಲ ಎಂದಿದ್ದಕ್ಕೆ ಯುವತಿಗೆ ನಿಂದನೆ: ತಪ್ಪಿಲ್ಲದಿದ್ದರೂ ಕ್ಷಮೆ ಕೇಳಿದ ರಾಜ್ ಬಿ ಶೆಟ್ಟಿ
ಸಿನಿಮಾ ಚೆನ್ನಾಗಿಲ್ಲ ಅಂತ ನೀನು ಏನು ಹೇಳೋದು, ಏನು ಚೆನ್ನಾಗಿಲ್ಲ. ಇಷ್ಟ ಇದ್ರೆ ನೋಡು, ಇಲ್ಲಾಂದ್ರೆ ಹೋಗ್ತಾ ಇರು ಎಂದು ಅಶ್ಲೀಲ ಶಬ್ಧದಲ್ಲಿ ಅಭಿಮಾನಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಏರು ಧ್ವನಿಯಲ್ಲಿ ನಿಂದಿಸಿದ್ದಾನೆ.
ಈ ವಿಡಿಯೋ ನೋಡಿ ನಟ ರಾಜ್ ಬಿ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ. ಈ ವಿಡಿಯೋದಲ್ಲಿರುವ ವ್ಯಕ್ತಿ ನಮ್ಮ ಸಿನಿಮಾ ತಂಡದವರಲ್ಲ. ಹಾಗಿದ್ದರೂ ಆ ವಿಡಿಯೋದಲ್ಲಿರುವ ಯುವತಿ ಅನುಭವಿಸಿದ ಕಿರುಕುಳಕ್ಕೆ ನಾನು ಕ್ಷಮೆ ಕೇಳುತ್ತೇನೆ. ಸಿನಿಮಾ ಎನ್ನುವುದು ವಿಮರ್ಶೆಗೊಳಪಡುವ ಮಾಧ್ಯಮ. ಚೆನ್ನಾಗಿದೆ ಅಥವಾ ಚೆನ್ನಾಗಿಲ್ಲ ಎನ್ನುವ ಅಭಿಪ್ರಾಯವನ್ನು ಹೇಳುವ ಸ್ವಾತಂತ್ರ್ಯ ನಮಗಿದೆ. ಇದಕ್ಕಾಗಿ ಯಾರೂ ಯಾರನ್ನೂ ಪೀಡಿಸಬಾರದು ಎಂದು ಸೋಷಿಯಲ್ ಮೀಡಿಯಾ ಮೂಲಕವೇ ಪ್ರತಿಕ್ರಿಯಿಸಿದ್ದಾರೆ.