ಹೊಸ ಲುಕ್ ನಲ್ಲಿ ಮಿಂಚುತ್ತಿದ್ದಾರೆ ನಟ ದುನಿಯಾ ವಿಜಯ್
ಮೊದಲ ಬಾರಿಗೆ ನಿರ್ದೇಶಿಸಿದ್ದ ಸಲಗ ಹಿಟ್ ಆದ ಖುಷಿಯಲ್ಲಿರುವ ವಿಜಿ ಇದೀಗ ತೆಲುಗಿನ ನಟ ಬಾಲಕೃಷ್ಣ ಸಿನಿಮಾವೊಂದರಲ್ಲಿ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿಯಿದೆ.
ಸದ್ಯಕ್ಕೆ ಬಿಳಿ ಕಲರ್ ನ ಹೇರ್ ಸ್ಟೈಲ್ ಮೂಲಕ ವಿಜಿ ಮಿಂಚುತ್ತಿದ್ದು, ಈ ಹೊಸ ಲುಕ್ ತೆಲುಗು ಸಿನಿಮಾಗಾಗಿ ಎಂಬ ಮಾತು ಕೇಳಿಬರುತ್ತಿದೆ. ಇನ್ನೂ ಯಾವುದು ಪಕ್ಕಾ ಆಗಿಲ್ಲ. ಆದರೆ ಹೊಸ ಹೇರ್ ಸ್ಟೈಲ್ ನಲ್ಲಿ ವಿಜಿ ಮತ್ತಷ್ಟು ಖಡಕ್ ಆಗಿ ಕಾಣಿಸುತ್ತಿರುವುದಂತೂ ಸುಳ್ಳಲ್ಲ.