ದರ್ಶನ್ ಗೆ ಬೆಂಗಳೂರು ಜೈಲಿನಿಂದ ಗೇಟ್ ಪಾಸ್ ಸಿಗುತ್ತಾ, ಕೋರ್ಟ್ ತೀರ್ಮಾನ ಏನಿರುತ್ತೋ

Krishnaveni K

ಮಂಗಳವಾರ, 2 ಸೆಪ್ಟಂಬರ್ 2025 (09:45 IST)

ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಜೈಲು ಸೇರಿರುವ ನಟ ದರ್ಶನ್ ಗೆ ಮುಂದೆ ಬಳ್ಳಾರಿ ಜೈಲೇ ಗತಿಯಾಗುತ್ತಾ ಎಂಬ ಬಗ್ಗೆ ಇಂದು ತೀರ್ಮಾನವಾಗಲಿದೆ.

ನಟ ದರ್ಶನ್ ಸೇರಿದಂತೆ 7 ಆರೋಪಿಗಳ ಜಾಮೀನು ರದ್ದಾದ ಬಳಿಕ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಇದಕ್ಕೆ ಮೊದಲು ದರ್ಶನ್ ಬಳ್ಳಾರಿ ಜೈಲಿನಲ್ಲಿದ್ದರು. ಪರಪ್ಪನ ಅಗ್ರಹಾರ ಜೈಲಿನಲ್ಲಿ ಅವರಿಗೆ ರಾಜಾತಿಥ್ಯ ಸಿಗುತ್ತಿತ್ತು ಎಂಬ ಕಾರಣಕ್ಕೆ ಬಳ್ಳಾರಿಗೆ ಶಿಫ್ಟ್ ಮಾಡಿದ್ದರು.

ಇದೀಗ ಮತ್ತೆ ಅವರನ್ನು ಬಳ್ಳಾರಿಗೆ ಶಿಫ್ಟ್ ಮಾಡಬೇಕು ಎಂದು ಕೋರ್ಟ್ ಗೆ ಮನವಿ ಸಲ್ಲಿಸಲಾಗಿದೆ. ಇದಕ್ಕೆ ದರ್ಶನ್ ಪರ ವಕೀಲರೂ ಆಕ್ಷೇಪಣೆ ಸಲ್ಲಿಸಿದ್ದಾರೆ. ಸದ್ಯದಲ್ಲೇ ಟ್ರಯಲ್ ಆರಂಭವಾಗುವುದರಿಂದ ಪದೇ ಪದೇ ಬೇರೆ ಜೈಲಿಗೆ ಶಿಫ್ಟ್ ಮಾಡುವುದು ಸರಿಯಲ್ಲ ಎಂದಿದ್ದಾರೆ. ಇದರ ಭವಿಷ್ಯ ಏನಾಗಲಿದೆ ಎಂದು ಕಾದುನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ