ಬಿ ಗ್ರೇಡ್ ಚಿತ್ರಗಳ ನಿರ್ಮಾಣದಲ್ಲಿ ಜೀತೇಂದ್ರ ಪುತ್ರಿ ಏಕ್ತಾ ಕಪೂರ್

ಬುಧವಾರ, 25 ಫೆಬ್ರವರಿ 2015 (10:07 IST)
ಶಕೀಲಾ, ಸನ್ನಿ ಲಿಯೋನ್, ಪೂನಂ ಪಾಂಡೆ, ಶರ್ಲಿನ್ ಚೋಪ್ರದಂತಹವರು ತಮ್ಮ ಬದುಕಿಗೆ ನೆಲೆ ಕಾಣಲು, ತಮ್ಮ ಬದುಕಲ್ಲಿ ಗಾಡ್ ಫಾದರ್ ಗಳು ಇಲ್ಲದೆ ಬೆಳೆಯಲು ಮಾಡಿದ ಸಾಹಸದ ಪರಿಣಾಮದಿಂದ ಅವರು ಸೆಕ್ಸ್ ಐಕಾನ್ ಗಳಾಗಿದ್ದಾರೆ. ಆದರೆ ಭಾರತೀಯ ಚಿತ್ರರಂಗದ ಪ್ರಸಿದ್ಧ ನಟ, ನಿರ್ಮಾಪಕ ಸೂಪರ್ಸ್ಟಾರ್ ಜೀತೇಂದ್ರ ಮಗಳಾಗಿ, ಒಳ್ಳೆಯ ಇಮೇಜ್ ಹೊಂದಿರುವ ಏಕ್ತಾ ಕಪೂರ್ ಈಗ ಬಿ ಗ್ರೇಡ್ ಚಿತ್ರಗಳ ನಿರ್ಮಾಣಕ್ಕೆ ಇಳಿದು ದುಡ್ಡು ಮಾಡುತ್ತಿರುವುದು ಈಗ ಎಲ್ಲರು ಮಾತಾಡಿಕೊಳ್ಳುತ್ತಿರುವ ಸಂಗತಿಯಾಗಿದೆ. ಧಾರವಾಹಿ ಲೋಕದಲ್ಲಿ ಒಂದು ಒಳ್ಳೆಯ ಪರಂಪರೆ, ಭಾವನೆ, ಮರ್ಯಾದೆ ಅದೂ ಇದೂ ಎನ್ನುತ್ತಾ ಹೊಸ ಹೊಸ ಬದುಕಿನ ಪಾಠಗಳನ್ನೂ ತನ್ನ ಸೀರಿಯಲ್ ಗಳ ಮೂಲಕ ತೋರಿಸಿದ ಏಕ್ತಾ ಅದಾದ ಬಳಿಕ ತನ್ನಲ್ಲಿರುವ ದುಡ್ಡನ್ನು ಬಿ ಗ್ರೇಡ್ ಚಿತ್ರಗಳ ನಿರ್ಮಾಣಕ್ಕೆ ಸುರಿಯುತ್ತಿದ್ದಾರೆ. 
ಅಂದಚಂದದ ಜೊತೆಗೆ ಒಳ್ಳೆಯ ಇಮೇಜ್ ಇದ್ದ ವಿದ್ಯಾಬಾಲನ್ ಅವರ ಕಲಿ ಡರ್ಟಿ ಪಿಕ್ಚರ್ಸ್ ಮೂಲಕ ಸಿಲ್ಕ್ ಸ್ಮಿತಾ  ಬದುಕನ್ನು ಜಗತ್ ಜಾಹೀರ ಮಾಡಿದರು ಏಕ್ತಾ. ಅದು ನಿರೀಕ್ಷಿಸದೆ ಇರುವಷ್ಟು ಗಳಿಕೆ ಮಾಡಿತ್ತು. ಅದಾದ ಬಳಿಕ ನೀಲಿ ಚಿತ್ರಗಳ ರಾಣಿ ಸನ್ನಿ ಲಿಯೋನ್ ಗಾಗಿ  ರಾಗಿಣಿ ಎಂ.ಎಂ.ಎಸ್.ಚಿತ್ರ ನಿರ್ಮಿಸಿ ಗಂಟು ದೊಡ್ಡದು ಮಾಡಿಕೊಂಡರು, ಈಗ ಅಂತಹದ್ದೇ ಕಥಾ ಹಂದರ ಇರುವ ಚಿತ್ರವನ್ನು ನಿರ್ಮಿಸುತ್ತಿರುವ ಬಗ್ಗೆ ನಿಮಗೆ ಗೊತ್ತಿದೆ. ಅದು XXX ಎನ್ನುವ ಹೆಸರಿನ ಚಿತ್ರ . ಈ ಟ್ರಿಬಲ್ ಎಕ್ಸ್ ಚಿತ್ರವು ಅತಿಯಾದ ಕಾಮ ಪಾಠಗಳನ್ನು  ಹೇಳುತ್ತಿರುವುದು ಸ್ಟಿಲ್ಸ್ ಗಳಿಂದ ತಿಳಿದು ಬಂದಿದೆ. ಒಟ್ಟಾರೆ ಏಕ್ತಾ ಈಗ ಬಿ ಗ್ರೇಡ್ ಮೇಡಮ್ ಆಗೋಕೆ ಹೊರಟಿದ್ದಾರೆ.. ಟೀವಿಯಲ್ಲಿ ಸೀರಿಯಲ್ ಗಳ ಮೂಲಕ  ಮರ್ಯಾದ ಪುರುಷನಿಗಿರ ಬೇಕಾದ ಅರ್ಹತೆಗಳ ಕಥೆ, ಹಿರಿತೆರೆಯಲ್ಲಿ ಮನ್ಮಥನಾಗಲು ಬೇಕಾಗುವ ಪಟ್ಟುಗಳನ್ನು ಏಕ್ತಾ ಟೀಚರ್ ಹೇಳಿ ಕೊಡ್ತಾ ಇದ್ದಾರೆ...!  

ವೆಬ್ದುನಿಯಾವನ್ನು ಓದಿ