ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯ ನಟ ಧರ್ಮೇಂದ್ರ: ಆಸ್ಪತ್ರೆಗೆ ದಾಖಲು

ಶುಕ್ರವಾರ, 29 ಮೇ 2015 (10:10 IST)
ಹಿರಿಯ ನಟ  ಧರ್ಮೇಂದ್ರ ಅವರನ್ನು ದಕ್ಷಿಣ ಮುಂಬೈ ನಲ್ಲಿರುವ ಪ್ರತಿಷ್ಠಿತ ಆಸ್ಪತ್ರೆ ಬ್ರಿಚ್ ಕ್ಯಾಂಡಿ ಯಲ್ಲಿ ಅಡ್ಮಿಟ್ ಮಾಡಲಾಗಿದೆ. ಅವರಿಗೆ ಹೊಟ್ಟೆ ನೋವಿನ ಸಮಸ್ಯೆ ಎದುರಾದ ಕಾರಣ ಆಸ್ಪತ್ರೆಗೆ ದಾಖಲು ಮಾಡಲಾಯಿತು, ಅದಕ್ಕೆಂದು ಎಂಡೋಸ್ಕೋಪಿಕ್  ಮಾಡಲಾಯಿತು ಎನ್ನುವ ಸಂಗತಿಯನ್ನು ನಿನ್ನೆ ಅಂದರೆ ಗುರುವಾರ ಮಾಧ್ಯಮಗಳಿಗೆ ತಿಳಿಸಲಾಗಿದೆ.
ಧರ್ಮೇಂದ್ರ ಅವರಿಗೆ ಹಿಮೋಗ್ಲೋಬಿನ್ ಕಡಿಮೆ ಪ್ರಮಾಣದಲ್ಲಿದೆ. ಆದಕಾರಣ ವೈದ್ಯರು ಅವರ ಹೊಟ್ಟೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಬ್ಲೀಡಿಂಗ್ ಆಗಿದೆ ಎಂದು ಮಾಜಿ ಸಂಸದರ ಮನೆಯವರಿಂದ ತಿಳಿದು ಬಂದಿದೆ. ಬುಧವಾರ ಸಂಜೆ ಬ್ರಿಚ್ ಕ್ಯಾಂಡಿ ಆಸ್ಪತ್ರೆಗೆ ಅವರು ಜೀರ್ಣಕೋಶ ತಜ್ಞರಾದ ಡಾ. ಶರದ್ ಷಾ ಅವರ ಆರೈಕೆಯಲ್ಲಿ ಆಸ್ಪತ್ರೆಗೆ ದಾಖಲಾದರು. ಇನ್ನು ಒಂದೆರಡು ದಿನಗಳಲ್ಲಿ ಈ ಹಿರಿಯನಟರನ್ನು ಡಿಸ್ಚಾರ್ಜ್ ಮಾಡಲಾಗುತ್ತದೆ ಎಂದು ಆಸ್ಪತ್ರೆಯ ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ. 

ವೆಬ್ದುನಿಯಾವನ್ನು ಓದಿ