ಡಿಸೆಂಬರ್ 29ರಂದು ಡಾ. ಸಿ.ಅಶ್ವಥ್ ಭಾವ ನಮನ

ಮಂಗಳವಾರ, 16 ಡಿಸೆಂಬರ್ 2014 (11:35 IST)
ಕನ್ನಡ ಸುಗಮ ಸಂಗೀತ ಲೋಕದ ರತ್ನ ದಿವಂಗಂತ ಡಾ. ಸಿ .ಅಶ್ವಥ್ ಅವರು. ಅಶ್ವಥ್ ಅವರ  75 ನೇ ಜಯಂತಿಯನ್ನು ಡಿಸೆಂಬರ್ 29 ರಂದು ಆಚರಿಸಲಾಗುತ್ತಿದೆ. ಸಾಹಿತ್ಯ ಸಂಯೋಜನೆ, ಗಾಯಕರಾಗಿಯೂ ಸಹಿತ ಎಲ್ಲ ಹೃದಯದಲ್ಲಿ ಸ್ಥಾನ ಪಡೆದಿದ್ದ ಸಿ ಅಶ್ವಥ್ ಅವರ ಜಯಂತಿಯಂದೇ ರಾಷ್ಟ್ರ ಕವಿ ಕುವೆಂಪು ಅವರ  ಜನ್ಮದಿನವಾಗಿದೆ. ಸಿ ಅಶ್ವಥ್  ಕನ್ನಡವೇ ಸತ್ಯ ಎಂದು ಹಾಡುತ್ತಾ ಕನ್ನಡ ಸುಗಮ ಸಂಗೀತ ಲೋಕವನ್ನು ಮಾತ್ರವಲ್ಲ ಸಂಗೀತ ಪ್ರಿಯರನ್ನು ಬೆರಗುಗೊಳಿಸಿದ್ದರು. ಅದರ ವ್ಯಾಪ್ತಿಯನ್ನು ಹೆಚ್ಚಿಸಿದ್ದರು. ಅವರಿಗೆ ಭಾವ ರೂಪಕ ಸಂಗಮ ಫೌಂಡೇಶನ್ ಅವರಿಗೆ ಅಂದು ಭಾವ ನಮನ ಹಾಡುಗಳ ಮೂಲಕ ಸಲ್ಲಿಸುತ್ತಿದೆ. 
ಡಾ. ಸಿ. ಅಶ್ವಥ್ ಮರಣಿಸಿ ಈಗಾಗಲೇ ಐದು ವರ್ಷಗಳು ಉರುಳಿವೆ. ಆದರೂ ಸಹಿತ ಅವರ ನೆನಪು ಇನ್ನು ಚಿರಂತನವಾಗಿದೆ ಅವರ ಅಭಿಮಾನಿಗಳ ಹೃದಯದಲ್ಲಿ. ಡಾ. ಅಂಬೇಡ್ಕರ್ ಭವನದಲ್ಲಿ   ಡಿಸೆಂಬರ್  29ರಂದು ಸಂಜೆ  5ಗಂಟೆಗೆ  ಈ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯ ಗಾಯಕರು ಭಾಗವಹಿಸಲಿದ್ದಾರೆ .ಅಂದು ಡಾ. ಸಿ ಅಶ್ವಥ್ ಅವರ ಸಂಗೀತ ಸಾಧನಗಳನ್ನು ಸಹಿತ ಜನರ ವೀಕ್ಷಣೆ ಮಾಡುವುದಕ್ಕೆಂದು  ಇಡುತ್ತಾರಂತೆ. ಈ ಮೂಲಕ ಆ ಮಹಾನ್ ಚೇತನಕ್ಕೆ ಭಾವಪೂರ್ವಕ ನಮನ ತೋರುತ್ತಿದ್ದಾರೆ ಅವರ ತಂಡವರು, ಅಭಿಮಾನಿಗಳು. 

ವೆಬ್ದುನಿಯಾವನ್ನು ಓದಿ