ಕಾರ್ಯ ನಿಲ್ಲಿಸಲಿವೆ ರಾಜಧಾನಿಯ ಪ್ರಸಿದ್ಧ ಚಿತ್ರಮಂದಿರಗಳು?!

ಸೋಮವಾರ, 30 ಮಾರ್ಚ್ 2015 (10:03 IST)
ಬೆಂಗಳೂರಿನಲ್ಲಿ ಈಗ ಇರುವ ಚಲನಚಿತ್ರ ಮಂದಿರಗಳು ತಮ್ಮ ಸ್ವರೂಪ ಬದಲಾಯಿಸಿ ಕೊಳ್ಳುತ್ತಿವೆ. ಮಾಲ್ಗಲಾಗಿ, ಸಂತೆಯಾಗಿ ಮತ್ತೊಂದಾಗಿ, ಮಗದೊಂದಾಗಿ ಹೀಗೆ ಭಿನ್ನ ರೀತಿಯಲ್ಲಿ ಸ್ವರೂಪ ಬದಲಾವಣೆ ಮಾಡಿಕೊಳ್ಳುತ್ತಿದೆ. ಈಗ ಆ ಸಾಲಿಗೆ ನರ್ತಕಿ ಮತ್ತು ಸಪ್ನಾ ಥಿಯೇಟರ್‌ಗಳೂ ಸಹಿತ ಸೇರ್ಪಡೆ ಆಗಿವೆ. ಈ ಎರಡೂ ಚಿತ್ರಮಂದಿರಗಳು ತಮ್ಮ ಪ್ರದರ್ಶನ ಕೆಲಸ ವನ್ನು ಮಾರ್ಚ್ 31ರ ತನಕ ನಡೆಸಿ ಆ ಬಳಿಕ ಅಂದರೆ ಎಪ್ರಿಲ್ 1ರಿಂದ ಕಾರ್ಯ ಸ್ಥಗಿತ ಗೊಳಿಸುತ್ತಿದೆ. ಈ ಎರಡೂ ಥಿಯೇಟರ್ಗಳ ಮಾಲೀಕರು ತಮ್ಮ ಕೆಲಸಗಾರರಿಗೆ ವೇತನ ಅದೂ ಇದೂ ಎಲ್ಲವನ್ನು ನೀಡಿ ತಮ್ಮ ಋಣ ತೀರಿಸಿಕೊಳ್ಳುತ್ತಿದ್ದಾರೆ.    
70ರ ದಶಕದಲ್ಲಿ ತನ್ನ ಕೆಲಸ ಆರಂಭ ಮಾಡಿದ ನರ್ತಕಿ ಚಿತ್ರ ಮಂದಿರ ಅನೇಕ ಅತ್ಯುತ್ತಮ ಕನ್ನಡ ಹಾಗೂ ಹಿಂದಿ ಚಿತ್ರಗಳನ್ನು ಪ್ರಸಾರ ಮಾಡಿತ್ತು. ಈಗ 45ವರ್ಷಗಳ ಲೀಸ್ ಮುಗಿದಿದ್ದು, ಈ ಎರಡು ಚಿತ್ರಮಂದಿರಗಳ ಯಾಜಮಾನರು ಚಿತ್ರ ಪ್ರದರ್ಶನ ನಿಲ್ಲಿಸಲು ಸಿದ್ಧರಾಗಿದ್ದಾರೆ. ಈ ಎರಡು ಚಿತ್ರಮಂದಿರಗಳು ಒಂದೇ ಆವರಣದಲ್ಲಿದೆ. ರಾಟೆ ನರ್ತಕಿಯಲ್ಲಿ ಪ್ರಸಾರ ಆಗುತ್ತಿರುವ ಕೊನೆಯ ಚಿತ್ರವಾಗಿದೆ. ಈ ಚಿತ್ರವೂ ಮಾರ್ಚ್ 31ರಂದು ಚಿತ್ರ ಪ್ರದರ್ಶನ ನಿಲ್ಲಿಸಲಿದೆ. ಈ ಮೂಲಕ ಹಳೆಯ ಕನ್ನಡ ಚಿತ್ರಮಂದಿರಗಳು ಮತ್ಯಾವ ಸ್ವರೂಪ ಕಾಣುತ್ತದೆಯೋ?!

ವೆಬ್ದುನಿಯಾವನ್ನು ಓದಿ