ಪುನೀತ್ ಫೋಟೋ ಹಿಡಿದು ಕೆಂಡ ತುಳಿದ ಅಭಿಮಾನಿ

ಗುರುವಾರ, 10 ಮಾರ್ಚ್ 2022 (08:40 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾದ ಮೇಲೂ ಅಭಿಮಾನಿಗಳು ಅವರನ್ನು ತಮ್ಮ ಹೃದಯದಲ್ಲಿ ಜೀವಂತವಾಗಿಟ್ಟಿದ್ದಾರೆ.

ಅಭಿಮಾನಿಯೊಬ್ಬರು ಕೆಂಡ ತುಳಿವ ಸೇವೆ ಮಾಡುವಾಗ ಪುನೀತ್ ಫೋಟೋವನ್ನೂ ಜೊತೆಗೇ ಹಿಡಿದು ಕೆಂಡದ ಮೇಲೆ ನಡೆದಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇತ್ತೀಚೆಗೆ ವಿವಿಧ ಕಡೆಗಳಲ್ಲಿ ದೇವಾಲಯಗಳಲ್ಲಿ ಜಾತ್ರೆ ವೇಳೆ ರಥಯಾತ್ರೆ ವೇಳೆ ಪುನೀತ್ ಫೋಟೋ ಹಿಡಿದು ಅವರನ್ನೂ ದೇವರ ಸಮಾನರಾಗಿ ಪೂಜಿಸಿದ್ದನ್ನು ನೋಡಿದ್ದೇವೆ. ಈ ಅಭಿಮಾನಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ