‘ಪಾಠಶಾಲ’ ಹಾಡಿಗೆ ಫಿದಾ ಆಗದವರು ಯಾರು ಹೇಳಿ?
ಈ ಹಾಡು ಈ ವರ್ಷದ ಸೂಪರ್ ಹಿಟ್ ಆಗುತ್ತದೆ. ಈ ಹಾಡು ನಮ್ಮಂಥಾ ವಿದ್ಯಾರ್ಥಿಗಳಿಗೆ ಧ‍್ಯೇಯ ಗೀತೆಯಾಗಲಿದೆ ಎಂದು ಇನ್ನು ಕೆಲವರು ಕಾಮೆಂಟ್ ಮಾಡಿದ್ದಾರೆ.
ಇದಕ್ಕೂ ಮೊದಲು ಪುನೀತ್ ರಾಜಕುಮಾರ್ ಅವರ ರಾಜಕುಮಾರ ಸಿನಿಮಾದ ಬೊಂಬೆ ಹೇಳುತೈತೆ ಎಂಬ ಹಾಡು ಎಲ್ಲಾ ವರ್ಗದ ಜನರಿಗೂ ಇಷ್ಟವಾಗಿತ್ತು. ಮತ್ತೆ ಅಂತಹದ್ದೇ ಒಂದು ಹಾಡು ಈ ಹಾಡಾಗಲಿದೆ ಎಂದು ಯುವರತ್ನ ಚಿತ್ರತಂಡ ಈ ಮೊದಲೇ ಹೇಳಿತ್ತು. ಅದರಂತೆ ತಮನ್ ಸಂಗೀತ ಸಂಯೋಜನೆಯಲ್ಲಿ ವಿಜಯ್ ಪ್ರಕಾಶ್ ಹಾಡಿರುವ ಈ ಹಾಡು ಎಲ್ಲರ ಮನಸ್ಸು ಗೆಲ್ಲುತ್ತಿದೆ.