ಯುವರತ್ನ ಪಾಠಶಾಲೆ ಇಂದಿನಿಂದ ಶುರು

ಬುಧವಾರ, 3 ಮಾರ್ಚ್ 2021 (09:54 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’ ಸಿನಿಮಾದ ಪ್ರಮುಖ ಹಾಡು ಪಾಠಶಾಲಾ ಇಂದು ಬಿಡುಗಡೆಯಾಗುತ್ತಿದೆ.


ಯುವರತ್ನ ಸಿನಿಮಾದ ಒಟ್ಟು ಮೂರು ಹಾಡುಗಳು ಈಗಾಗಲೇ ಬಿಡುಗಡೆಯಾಗಿದ್ದು, ಮೂರೂ ಸೂಪರ್ ಹಿಟ್ ಆಗಿದೆ. ಇದೀಗ ನಾಲ್ಕನೇ ಹಾಡು ಇಂದು ಅಪರಾಹ್ನ 3.28 ಕ್ಕೆ ಹೊಂಬಾಳೆ ಫಿಲಂಸ್ ಯೂ ಟ್ಯೂಬ್ ನಲ್ಲಿ ರಿಲೀಸ್ ಆಗುತ್ತಿದೆ.

 ಈ ಹಾಡು ಯುವರತ್ನ ಸಿನಿಮಾದ ಆತ್ಮ ಎಂದೇ ಹೇಳಲಾಗಿದೆ. ತಮನ್ ಸಂಗೀತ ಸಂಯೋಜಿಸಿರುವ ಈ ಹಾಡು ರಾಜಕುಮಾರ ಸಿನಿಮಾದ ಬೊಂಬೆ ಹೇಳುತೈತೆ ಹಾಡಿನಂತೇ ಮೋಡಿ ಮಾಡಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಹೀಗಾಗಿ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿದೆ. ಈ ಹಾಡನ್ನೂ ಹಿಟ್ ಹಾಡುಗಳ ಸರದಾರ ವಿಜಯ್ ಪ್ರಕಾಶ್ ಹಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ