ಸಲ್ಮಾನ್‌ರಂತೆ ಸೂರಜ್ ಪಾಂಚೋಲಿಯನ್ನು ಶರ್ಟ್ ಬಿಚ್ಚಲು ಹೇಳಿದ ಅಭಿಮಾನಿಗಳು

ಶುಕ್ರವಾರ, 11 ಸೆಪ್ಟಂಬರ್ 2015 (10:18 IST)
ಸಲ್ಮಾನ್ ಖಾನ್  ಅಂದಾಕ್ಷಣ ಎಲ್ಲರ ಕಣ್ಣ ಮೆದೆ ಬರೋದು ಶರ್ಟ್ ಬಿಟ್ಟಿ ಬರೀ ಮೈಯಲ್ಲಿ ಕಾಣಿಸಿಕೊಳ್ಳುವ ಸಲ್ಮಾನ್ ಖಾನೇ. ಸಲ್ಮಾನ್ ಈ ರೀತಿ ಕಾಣಿಸಿಕೊಂಡ್ರೆನೇ ಅವರ ಅಭಿಮಾನಿಗಳಿಗೆ ಏನೋ ಒಂಥರಾ ಖುಷಿ. ಅಲ್ಲೇ ಅಂತಹ ಸಿನಿಮಾಗಳೇ ಸಲ್ಲು ಪಾಲಿಗೆ ಅದೃಷ್ಟ ತರುತ್ತವೆ ಅನ್ನೋದು ಅವರ ಅಭಿಮಾನಿಗಳ ಲೆಕ್ಕಾಚಾರ.
ಈ ಬಾರಿ ಸಲ್ಲು ತಮ್ಮ ಹೋಮ್ ಪ್ರೊಡಕ್ಷನ್ ನಲ್ಲಿ ಸಿನಿಮಾ ನಿರ್ಮಿಸಿದ್ದು, ಆ ಸಿನಿಮಾ ಮೂಲಕ ಸೂರಜ್ ಪಾಂಚೋಲಿ ಹಾಗೂ ಆತಿಯಾ ಶೆಟ್ಟಿಯನ್ನು ಬೆಳ್ಳಿತೆರೆಗ ಪರಿಚಯಿಸುತ್ತಿದ್ದಾರೆ. ಆದ್ರೆ ಮೊದಲ ಸಿನಿಮಾದಲ್ಲೇ ಸಲ್ಮಾನ್ ಸೂರಜ್ ನನ್ನು ಶರ್ಟ್ ಲೆಸ್ ಆಗಿ ತೋರಿಸಿದ್ದಾರೆ. ಇದು ಅಭಿಮಾನಿಘಲಿಗೂ ಖುಷಿ ನೀಡಿದೆಯಂತೆ. ಅಲ್ಲದೇ ಮುಂದಿನ ಸಿನಿಮಾದಲ್ಲೂ ಈತನನ್ನು ಇದೇ ರೀತಿ ತೋರಿಸಿ ಅಂತಿದ್ದಾರಂತೆ.
 
ಹೀಗೋ ಸಿನಿಮಾವನ್ನು ನಿಖಿಲ್ ಅಡ್ವಾಣಿ ನಿರ್ದೇಶಿಸಿದ್ದಾರೆ. ಸೂರಜ್ ಹಾಗೂ ಆತಿಯಾ ಇಬ್ಬರಿಗೂ ಈ ಸಿನಿಮಾ ಬಹು ನಿರೀಕ್ಷೆಯ ಸಿನಿಮಾವಾಗಿದೆ. ಈ ಸಿನಿಮಾ ಇವತ್ತು ವಿಶ್ವದಾದ್ಯಂತ ರಿಲೀಸ್ ಆಗಿದೆ.

ವೆಬ್ದುನಿಯಾವನ್ನು ಓದಿ