ಆಸ್ಕರ್ ನಿಂದ ಹೊರಬಿದ್ದ ಆರ್ ಆರ್ ಆರ್: ಫ್ಯಾನ್ಸ್ ತೀವ್ರ ಆಕ್ರೋಶ

ಬುಧವಾರ, 21 ಸೆಪ್ಟಂಬರ್ 2022 (09:17 IST)
ನವದೆಹಲಿ: ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ಆಸ್ಕರ್ ಗೆ ಆಯ್ಕೆಯಾಗುತ್ತದೆ ಎಂದೇ ಎಲ್ಲರ ನಂಬಿಕೆಯಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಆರ್ ಆರ್ ಆರ್ ಬದಲಿಗೆ ಗುಜರಾತಿ ಸಿನಿಮಾ ಚೆಲ್ಲೊ ಶೋ ಆಸ್ಕರ್ ಗೆ ಆಯ್ಕೆಯಾಗಿರುವುದು ಫ್ಯಾನ್ಸ್ ಆಕ್ರೋಶಕ್ಕೆ ಕಾರಣವಾಗಿದೆ.

ಬಾಕ್ಸ್ ಆಫೀಸ್ ನಲ್ಲಿ ದಾಖಲೆಯ ಗಳಿಕೆ ಮಾಡಿದ್ದ ವಿಶ್ವದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದ್ದ ಆರ್ ಆರ್ ಆರ್ ಸಿನಿಮಾ ಬದಲಿಗೆ ಅತ್ಯುತ್ತಮ ವಿದೇಶೀ ಸಿನಿಮಾ ವಿಭಾಗದ ಪ್ರಶಸ್ತಿ ಗುಜರಾತಿ ಸಿನಿಮಾವನ್ನು ಆಯ್ಕೆ ಮಾಡಿರುವುದಕ್ಕೆ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ನಿರ್ದೇಶಕ ರಾಜಮೌಳಿ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಆರ್ ಆರ್ ಆರ್ ಚಿತ್ರಕ್ಕೆ ಅವಕಾಶ ನೀಡಲೇಬೇಕು ಎಂದು ಫ್ಯಾನ್ಸ್ ಆಗ್ರಹಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ