ಈ ಕಾರಣಕ್ಕೆ ನಟ ಕಾರ್ತಿಯನ್ನು ನೋಡಿ ಆಘಾತಗೊಂಡ ಅಭಿಮಾನಿಗಳು

ಗುರುವಾರ, 17 ಡಿಸೆಂಬರ್ 2020 (09:12 IST)
ಚೆನ್ನೈ : ನಟ ಕಾರ್ತಿ ಖ್ಯಾತ ನಟರಲ್ಲಿ ಒಬ್ಬರು. ಅವರು ಪ್ರಸ್ತುತ ಸುಲ್ತಾನ್ ಎಂಬ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.  ಹಾಗೇ ಪೊನ್ನಿ ಸೆಲ್ವನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ನಟ ಕಾರ್ತಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಫೋಟೊಗಳನ್ನು ಪೋಸ್ಟ್ ಮಾಡುವುದಿಲ್ಲ. ಅವರು ಚಲನಚಿತ್ರಗಳ ಪ್ರಚಾರಕ್ಕಾಗಿ ಅಥವಾ ಸಾಮಾಜಿಕ ಕಾಳಜಿಗಾಗಿ ಮಾತ್ರ ಫೋಟೊಗಳನ್ನು ಪ್ರಕಟಿಸುತ್ತಾರೆ. ಆದರೆ ಇತ್ತೀಚೆಗೆ ನಟ ಕಾರ್ತಿ ಅವರ ಫೋಟೊ ಬಿಡುಗಡೆಯಾಗಿದ್ದು, ಅದನ್ನು ಕಂಡು ಅವರ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ.

ಈ ಫೋಟೊದಲ್ಲಿ ಅವರು ಕೂದಲು ಬೂದುಕಟ್ಟಿ ವಯಸ್ಸಾದವರಂತೆ ಕಾಣುತ್ತಿದ್ದಾರೆ. 43ನೇ ವಯಸ್ಸಿಗೆ ಈ ರೀತಿ ಆಗಿದ್ದಾರೆಯೇ ಎಂದು ತಿಳಿಯಲು ಹಲವರು ಆನ್ ಲೈನ್ ನಲ್ಲಿ ಹುಡುಕಾಡುತ್ತಿದ್ದಾರೆ ಎನ್ನಲಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ