ಹಿರಿಯ ನಟ ಅನಂತನಾಗ್ ಕಾರು ಅಪಘಾತ

ಗುರುವಾರ, 25 ಡಿಸೆಂಬರ್ 2014 (13:09 IST)
ಹಿರಿಯ ನಟ ಅನಂತನಾಗ್ ಪ್ರಯಾಣಿಸುತ್ತಿದ್ದ ಇನೋವಾ ಕಾರು ಅಪಘಾತಕ್ಕೀಡಾಗಿದೆ.
 
ಹಿರಿಯ ನಟ ಅನಂತನಾಗ್ ಪ್ರಯಾಣಿಸುತ್ತಿದ್ದ ಇನೋವಾ ಕಾರು ಇಂಡಿಕಾ ಕಾರಿಗೆ ಡಿಕ್ಕಿ ಹೊಡೆದಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
 
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅನಂತನಾಗ್ ಪತ್ನಿ ಗಾಯಿತ್ರಿ, ಅನಂತನಾಗ್ ಮೈಸೂರಿನಲ್ಲಿ ಐರಾವತ ಶೂಟಿಂಗ್ ಮುಗಿಸಿಕೊಂಡು ಮರಳುವಾಗ ಘಟನೆ ಸಂಭವಿಸಿದ್ದು, ಅನಂತನಾಗ್ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿಸಿದ್ದಾರೆ.
 
ಕಾರಿನ ಚಾಲಕನಿಗೆ ಕೂಡಾ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿವರಣೆ ನೀಡಿದ್ದಾರೆ.   
 

ವೆಬ್ದುನಿಯಾವನ್ನು ಓದಿ