ಸ್ಯಾಂಡಲ್ ವುಡ್ ನಲ್ಲಿಂದು ಸಿನಿಮಾಗಳ ಧಮಾಕಾ

ಶುಕ್ರವಾರ, 20 ಮೇ 2022 (08:50 IST)
ಬೆಂಗಳೂರು: ಈ ಶುಕ್ರವಾರ ಸ್ಯಾಂಡಲ್ ವುಡ್ ನಲ್ಲಿ ನಾಲ್ಕು ಬಹುನಿರೀಕ್ಷಿತ ಸಿನಿಮಾಗಳು ತೆರೆಗೆ ಬರುತ್ತಿವೆ.

ಡಾಲಿ ಧನಂಜಯ್ ನಾಯಕರಾಗಿರುವ ಥ್ರಿಲ್ಲರ್ ಸಿನಿಮಾ ಟ್ವೆಂಟಿ ಒನ್ ಅವರ್ ಇಂದು ಬಿಡುಗಡೆಯಾಗುತ್ತಿದೆ. ಧನಂಜಯ್ ಜೊತೆಗೆ ದುರ್ಗಾ ಕೃಷ್ಣ, ಸುದೇವ್ ನಾಯರ್ ಮುಂತಾದವರ ತಾರಾಗಣವಿದೆ.

ರಕ್ಷಿತ್ ಶೆಟ್ಟಿ ನಿರ್ಮಾಣ ಸಂಸ್ಥೆ ಪರಂವಾ ಸ್ಟುಡಿಯೋಸ್ ನಿರ್ಮಾಣದ ಸಕುಟುಂಬ ಸಮೇತ ಸಿನಿಮಾ ಇಂದು ತೆರೆ ಕಾಣಲಿದೆ. ಹೆಸರೇ ಹೇಳುವಂತೆ ಫ್ಯಾಮಿಲಿ ಎಂಟರ್ ಟೈನರ್ ಜೊತೆಗೆ ಸಸ್ಪೆನ್ಸ್ ಕೂಡಾ ಇರಲಿದೆ. ಈ ಸಿನಿಮಾದಲ್ಲಿ ಅಚ್ಯುತ್ ಕುಮಾರ್, ಕೃಷ್ಣ ಹೆಬ್ಬಳೆ, ಭರತ್, ಪುಷ್ಪ ಬೆಳವಾಡಿ ಮುಂತಾದವರು ಪ್ರಮುಖ ಪಾತ್ರದಲ್ಲಿದ್ದಾರೆ.

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ನಾಯಕರಾಗಿರುವ ಪ್ರಾರಂಭ ಸಿನಿಮಾ ಇಂದಿನಿಂದ ತೆರೆಗೆ ಬರುತ್ತಿದೆ. ಇದು ಪಕ್ಕಾ ಲವ್ ಎಂಟರ್ ಟೈನರ್ ಆಗಿದ್ದು, ಯುವಜನರಿಗೆ ಇಷ್ಟವಾಗಲಿದೆ.

ಶ್ರೀನಗರ ಕಿಟ್ಟಿ ಮತ್ತು ಸಿದ್ಧಾರ್ಥ್ ಮಹೇಶ್ ಪ್ರಮುಖ ಪಾತ್ರದಲ್ಲಿರುವ ಗರುಡ ಸಿನಿಮಾವೂ ಇಂದೇ ರಿಲೀಸ್ ಆಗುತ್ತಿದೆ. ಇದು ಆಕ್ಷನ್ ಥ್ರಿಲ್ಲರ್ ಆಗಿದ್ದು ಪಕ್ಕಾ ಮಾಸ್ ಕತೆ ಹೊಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ