ಕೊರೋನಾ ಬಳಿಕ ಪ್ರದರ್ಶನಗೊಂಡ ಮೊದಲ ಸಿನಿಮಾ

ಬುಧವಾರ, 7 ಅಕ್ಟೋಬರ್ 2020 (09:43 IST)
ಬೆಂಗಳೂರು: ಕೊರೋನಾ, ಲಾಕ್ ಡೌನ್ ಬಳಿಕ ಚಿತ್ರರಂಗ ತೆರೆಯಲು ಸರ್ಕಾರ ಒಪ್ಪಿಗೆ ನೀಡಿದೆ. ಇದರ ಬೆನ್ನಲ್ಲೇ ಕನ್ನಡದಲ್ಲಿ ಮೊದಲ ಸಿನಿಮಾ ಪ್ರೀಮಿಯರ್ ಶೋ ಏರ್ಪಡಿಸಲಾಗಿತ್ತು.


ಆ ಸಿನಿಮಾ ‘ಬೆಂಕಿಯ ಬಲೆ’. ನಿನ್ನೆ ಕಲಾವಿದರ ಸಂಘದಲ್ಲಿ ಚಿತ್ರದ ಪ್ರೀಮಿಯರ್ ಶೋ ಪ್ರದರ್ಶನಗೊಂಡಿದೆ. ಆದರೆ ಸಾರ್ವಜನಿಕರು ಈ ಸಿನಿಮಾ ವೀಕ್ಷಿಸಿಲ್ಲ. ಕೇವಲ ಚಿತ್ರತಂಡ ಮತ್ತು ಆಪ್ತರಿಗಾಗಿ ಈ ಸಿನಿಮಾ ಪ್ರದರ್ಶನ ಏರ್ಪಡಿಸಲಾಗಿತ್ತು. ಶಿವಾಜಿ ಈ ಸಿನಿಮಾದ ನಿರ್ಮಾಪಕ ಕಮ್ ನಿರ್ದೇಶಕರು. ಈ ಚಿತ್ರದಿಂದ ಬಂದ ಹಣವನ್ನು ಕ್ಯಾನ್ಸರ್ ಪೀಡಿತರ ನೆರವಿಗೆ ನೀಡಲು ಚಿತ್ರತಂಡ ಉದ್ದೇಶಿಸಿದೆಯಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ