ಶಾಂದಾರ್ ಸಿನಿಮಾದ ಫಸ್ಟ್ ಲುಕ್ ರಿಲೀಸ್

ಗುರುವಾರ, 6 ಆಗಸ್ಟ್ 2015 (11:20 IST)
ಶಾಹೀದ್ ಕಪೂರ್ ಹಾಗೂ ಆಲಿಯಾ ಭಟ್ ಅಭಿನಯಿಸುತ್ತಿರವ ಬಹು ನಿರೀಕ್ಷಿತ ಸಿನಿಮಾ ಶಾಂದಾರ್ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಸಿನಿಮಾದ ಫಸ್ಟ್ ಲುಕ್ ಪ್ರೇಕ್ಷಕರಲ್ಲಿ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿದ್ದು, ಇದೊಂದು ಅಪ್ಪಟ ಲವ್ ಸ್ಟೋರಿ ಅನ್ನೋದು ನೋಡುತ್ತಿದ್ದಂತೆ ಗೊತ್ತಾಗುತ್ತಿದೆ.
ಇನ್ನು ವಿವಾಹದ ಬಳಿಕ ಶಾಹಿದ್ ಅಭಿನಯಿಸುತ್ತಿರುವ ಮೊದಲ ಸಿನಿಮಾವಾಗಿದ್ದು, ಈಗಾಗಲೇ ಆಲಿಯಾ ಹಾಗೂ ಶಾಹೀದ್ ಕಾಂಬಿನೇಶನ್ ಸಖತ್ತಾಗಿ ವರ್ಕ್ ಔಟ್ ಆಗುತ್ತೆ ಅನ್ನೋದು ಸಿನಿಮಾದ ಫಸ್ಟ್ ಲುಕ್ ನೋಡುತ್ತಿದ್ದಂತೆಯೇ ಸೂಚನೆ ಸಿಕ್ಕಿದೆ. ಇನ್ನು ಸಿನಿಮಾದಲ್ಲಿ ಆಲಿಯಾ ಹಾಗೂ ಶಾಹಿದ್ ಮೊದಲ ಬಾರಿಗೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದು, ಇಬ್ಬರೂ ಫಸ್ಟ್ ಲುಕ್ ನಲ್ಲಿ ಕ್ಯೂಟ್ ಆಗಿ ಕಾಣಿಸುತ್ತಿದ್ದಾರೆ.
 
ಸಿನಿಮಾದ ಫಸ್ಟ್ ಲುಕ್ ನ್ನು ಶಾಹೀದ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಶೇರ್ ಮಾಡಿಕೊಂಡಿದ್ದು, ಈಗಾಗಲೇ ಫ್ಯಾನ್ಸ್ ನಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದ್ರೆ ಸಿನಿಮಾದ ಫಸ್ಟ್ ಲುಕ್ ನೋಡಿದ್ರೆ ಚಿತ್ರದ ಬಗೆಗಗಿನ ಹೆಚ್ಚಿನ ಮಾಹಿತಿ ಮಾತ್ರ ಗೊತ್ತಾಗುತ್ತಿಲ್ಲ.  ಒಟ್ಟಿನಲ್ಲಿ ಫಸ್ಟ್ ಲುಕ್ ನಲ್ಲೇ ಅಭಿಮಾನಿಗಳ ಮನ ಸೆಳೆದಿರುವ ಶಾಂದಾರ್ ಇನ್ಮುಂದಿನ ದಿನದಲ್ಲಿ ಎಷ್ಟರ ಮಟ್ಟಿಗೆ ಸುದ್ದಿ ಮಾಡುತ್ತೆ ಕಾದು ನೋಡ್ಬೇಕು.

ವೆಬ್ದುನಿಯಾವನ್ನು ಓದಿ