'ಫಸ್ಟ್ ರ್ಯಾಂಕ್ ರಾಜು' ಸಿನಿಮಾದ ಆಡಿಯೋ ರಿಲೀಸ್

ಗುರುವಾರ, 3 ಸೆಪ್ಟಂಬರ್ 2015 (09:35 IST)
ಸ್ಯಾಂಡಲ್ ವುಡ್ ನಲ್ಲಿ ಸದ್ಯ ಹೊಸಬರ ಅಲೆ ಪ್ರಾರಂಭವಾಗಿದೆ. ಹೊಸಬರ  ಚಿತ್ರಗಳೇ ಚಂದನವನದಲ್ಲಿ ಸಾಲು ಸಾಲಾಗಿ ಸೆಟ್ಟೇರುತ್ತಿವೆ. ಅಂತಹ ಸಿನಿಮಾಗಳಲ್ಲಿ ಫಸ್ಟ್ ರ್ಯಾಂಕ್ ರಾಜು ಸಿನಿಮಾ ಕೂಡ ಒಂದು.
ತನ್ನ ಟ್ರೇಲರ್ ನಿಂದಾನೇ ಆರು ಕೋಟಿ ಕನ್ನಡಿಗರ ದಿಲ್ ಕದ್ದ ಈ ಸಿನಿಮಾ ಸದ್ಯ ಸ್ಯಾಂಡಲ್ ವುಡ್ ಅಂಗಳದಲ್ಲಿ ಸುದ್ದಿ ಮಾಡುತ್ತಿದೆ.  ಟೈಟಲ್ ಜೊತೆಗೆ ಈ ಸಿನಿಮಾದ ಟ್ಯಾಗ್ ಲೈನ್ ಕೂಡ ಸಖತ್ ಕ್ಯಾಚಿಯಾಗಿದೆ.  ವಿದ್ಯೆ 100% ಬುದ್ಧಿ 0% ಎನ್ನುವ ಟ್ಯಾಗ್ ಲೈನ್ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಇತ್ತೀಚೆಗಷ್ಟೇ ಈ ಸಿನಿಮಾದ ಆಡಿಯೋ ಕೂಡ ರಿಲೀಸ್ ಆಗಿದೆ. ಸಿನಿಮಾದಲ್ಲಿನ ಹಾಡುಗಳಿಗೆ ಯೋಗರಾಜ್ ಭಟ್ ಹಾಗೂ ಜಯಂತ ಕಾಯ್ಕಿಣಿ ಸಾಹಿತ್ಯ ಬರೆದಿದದಾರೆ.
 
ಸಿನಿಮಾದಲ್ಲಿ ಸೈಬರ್ ಯುಗದೊಳ್ ಪ್ರೇಮಕಾವ್ಯ ಸಿನಿಮಾದಲ್ಲಿ ಕಾಣಿಸಿಕೊಂಡಿದದ ಗುರುನಂದನ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಅಪೂರ್ವ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾವನ್ನು ನರೇಶ್ ಅನ್ನೋ ನವ ಪ್ರತಿಭೆ ನಿರ್ದೇಶಿಸಿದ್ದಾರೆ.  ಈಗಾಗಲೇ ಎಲ್ಲೆಡೆ ತನ್ನ ಹವಾ ಕ್ರಿಯೇಟ್ ಮಾಡಿರುವ ಈ ಸಿನಿಮಾ ಅತೀ ಶೀಘ್ರದಲ್ಲಿ ಪ್ರೇ7ಕರೆದುರಿಗೆ ಬರಲಿದೆ.

ವೆಬ್ದುನಿಯಾವನ್ನು ಓದಿ